ಮರದ ಕೆಳಗಡೆ ವಿದ್ಯಾರ್ಥಿಗಳಿಗೆ ಪಾಠ

Published on

ಬಳ್ಳಾರಿ: ತಾಲೂಕಿನ ಹೊಸ ಯರಗುಡಿ ಗ್ರಾಮದ ಶಾಲೆಯಲ್ಲಿ ಕೊಠಡಿಗಳ ಅಭಾವದಿಂದ ಶಾಲಾ ಆವರಣದ ಮರದ ಕೆಳಗಡೆ ಕುಳಿತು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಗ್ರಾಮದ ಎಸ್‌ಸಿ, ಎಸ್‌ಟಿ ಕಾಲನಿಯಲ್ಲಿಯರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಒಂದ ರಿಂದ ಐದನೇ ತರಗತಿಯಲ್ಲಿ ಒಟ್ಟು 147 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ, ಶಾಲೆಯಲ್ಲಿ ಮೂರು ಕೊಠಡಿ ಇದ್ದರೂ ಒಂದನ್ನು ಮುಖ್ಯಗುರುಗಳ ಕಚೇರಿಯನ್ನು ಮಾಡಲಾಗಿದೆ. ಉಳಿದ ಎರಡು ಕೊಠಡಿಗಳಲ್ಲಿ ಐದು ತರಗತಿಗಳು ನಡೆಸಬೇಕಾದ ಅನಿವಾರ್ಯತೆಯಿದೆ. ಅಲ್ಲದೆ, ಎರಡು ಕೊಠಡಿಗಳಲ್ಲಿ ಒಂದು ಕೋಣೆಯನ್ನು ಮಧ್ಯಾಹ್ನದ ಅಡುಗೆ ತಯಾರಿಸುವ ಸಾಮಗ್ರಿ ಹಾಗೂ ಧಾನ್ಯಗಳನ್ನು ಸಂಗ್ರಹಿಸಲಾಗಿದೆ. ಆದ್ದರಿಂದ, ಉಳಿದ ಎರಡು ತರಗತಿಯ ವಿದ್ಯಾರ್ಥಿಗಳನ್ನು ಶಾಲೆಯ ಆವರಣದ ಮರದ ಕೆಳಗಡೆ ಕೂರಿಸಿ ಪಾಠ ಮಾಡಲಾಗುತ್ತಿದೆ.

ಅಡುಗೆ ಮನೆ ಕೋಣೆಯನ್ನು ಶಿಥೀಲಾ ವ್ಯವಸ್ಥೆ ತಲುಪಿದ್ದರಿಂದ ದುರಸ್ತಿಗಾಗಿ ನೆಲಸಮಗೊಳಿಸಲಾಗಿದೆ. ಸದ್ಯ, ಅಡುಗೆ ಕೋಣೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅಲ್ಲದೆ, ಹೆಚ್ಚುವಾರಿ ಕೊಠಡಿಗಳನ್ನು ನಿರ್ಮಿಸುವಂತೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ಬಂದರೂ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಅಸಮಾಧಾನ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net