ಬಳ್ಳಾರಿ : ಯುವಪೀಳಿಗೆಯು ಕೌಶಲ್ಯವಂತರಾಗಿ ಸಾಮಾಜಿಕ ಮತ್ತು ಆರ್ಥಿಕ ಸ್ವಾವಲಂಬನೆಯ ಜೀವನ ರೂಪಿಸಿಕೊಳ್ಳಲು ಕಲಿತ ವಿದ್ಯೆಗೆ ಕೌಶಲ್ಯ ಅತ್ಯಗತ್ಯ ಎಂದು ಜಿಪಂ ರಾಹುಲ್ ಶರಣಪ್ಪ ಸಂಕನೂರ ಹೇಳಿದರು.
ನಗರದ ಜಿಲ್ಲಾಡಳಿತ, ಜಿಪಂ, ಕೌಶಲ್ಯ ಯೋಜನೆಯಡಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸ್ಕಿಲ್ ಡೆವಲಪ್‌ಮೆಂಟ್ ಕಾಮರ್ಸ್ ಸೆಂಟರ್‌ನಲ್ಲಿ ಪದವೀಧರರಿಗಾಗಿ ಎರಡು ತಿಂಗಳ ಉಚಿತ `ಟ್ಯಾಲಿ ಅಪ್ರೆಂಟಿಸ್ ಕೌಶಲ್ಯಪೂರ್ಣ ತರಬೇತಿ ನೀಡುವ ನೂತನ ಬ್ಯಾಚ್‌ಗೆ ಚಾಲನೆ ನೀಡಿ ಮಾತನಾಡಿದರು.
ಪದವೀಧರರು ತರಗತಿಯಲ್ಲಿ ಕಲಿತ ಜ್ಞಾನಕ್ಕೂ ಮತ್ತು ಉದ್ಯಮದಲ್ಲಿಯ ಅಗತ್ಯಗಳಿಗೂ ಸಾಕಷ್ಟು ಅಂತರವಿದೆ. ಈ ಅಂತರವನ್ನು ಕಡಿಮೆ ಮಾಡಲು ಕೌಶಲ್ಯ ತರಬೇತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ವೃತ್ತಿಯಲ್ಲಿನ ದೈನಂದಿನ ಅಗತ್ಯಗಳಿಗೆ ಪೂರಕವಾದ ಕೌಶಲ್ಯ ತರಬೇತಿ. ಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯ ತರಬೇತಿಯನ್ನು ನೀಡಲಾಗುತ್ತಿದ್ದು, ಶಿಬಿರಾರ್ಥಿಗಳು ಟ್ಯಾಲಿ ಬಳಕೆಯ ಕೌಶಲ್ಯವನ್ನು ಪರಿಣಿತರಿಂದ ಪಡೆದು, ಸುಲಭವಾಗಿ ಉದ್ಯೋಗವಕಾಶ ಹೊಂದಬಹುದು ಎಂದು ಹೇಳಿದರು.
ಬಿಡಿಸಿಸಿ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಮಾತನಾಡಿ, ಯುವಪೀಳಿಗೆಯನ್ನು ಸಾಮಾಜಿಕವಾಗಿ-ಆರ್ಥಿಕವಾಗಿ ಮತ್ತು ಕೌಶಲ್ಯಪೂರ್ಣವಾಗಿ ಭವಿಷ್ಯದ ಪೀಳಿಗೆಗೆ ಸಮರ್ಥರನ್ನಾಗಿ ರೂಪಿಸುವಲ್ಲಿ ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಆಸಕ್ತರಿಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಿದೆ. ಸ್ಕಿಲ್‌ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ಕೌಶಲ್ಯಪೂರ್ಣ ತರಬೇತಿ ಪಡೆದವರಿಗೆ ಉದ್ಯೋಗಗಳು ಸುಲಭವಾಗಿ ಸಿಗುತ್ತಿವೆ ಎಂದರು.