ಬಳ್ಳಾರಿ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ಹಿಂಗಾರು ಹಂಗಾಮಿನ ಬಿಳಿ ಜೋಳವನ್ನು ಖರೀದಿ ಕೇಂದ್ರಗಳಿಗೆ ಹಾಕಲು ರೈತರು ಆಸಕ್ತಿ ತೋರುತ್ತಿಲ್ಲ. ಸರ್ಕಾರ ಗುಣಮಟ್ಟದ ಕೊರತೆಯಿಂದ ಇಪ್ಪತ್ತು ಕಿಂಟ್ವಾಲ್ ಬದಲು 15 ಕಿಂಟ್ವಾಲ್ ಖರೀದಿಸಲು ಆದೇಶಿಸಿದೆ.
ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳಲ್ಲಿ ಜೋಳ ಬೆಳೆದ ರೈತರು ಮಾರುಕಟ್ಟೆಯ ಬೆಲೆಗಿಂತ ಖರೀದಿ ಕೇಂದ್ರಕ್ಕೆ ಹಾಕುವ ಉದ್ದೇಶದಿಂದ ಕಳೆದ ಐದು ತಿಂಗಳ ಹಿಂದಯೇ ಕಟಾವುಗೊಳಿಸಿದ ಜೋಳವನ್ನು ಗೋದಾಮುಗಳ ಬಾಡಿಗೆ ಪಡೆದು ಕೆಡೆದಂತೆ ಸಂಗ್ರಹಿಸಿದ್ದರು. ಆದರೆ, ರಾಜ್ಯ ಸರ್ಕಾರ ಎಕರೆಗೆ ನಿಗದಿಪಡಿಸಿರುವ ಮಿತಿ ಹಾಗೂ ಅಧಿಕಾರಿಗಳು ರಾಜ್ಯಾದ್ಯಂತ ಖರೀದಿ ಕೇಂದ್ರಗಳು ತೆರೆಯಲು ವಿಳಂಬದಿಂದ ಜೋಳವು ಒಂದೇ ಸ್ಥಳದಲ್ಲಿ ಸಂಗ್ರಹ ಹಾಗೂ ಅವಧಿಯು ಮಿತಿ ಪೂರ್ಣಗೊಂಡಿದ್ದರಿಂದ ಸಂಪೂರ್ಣವಾಗಿ ಜೋಳಕ್ಕೆ ಹುಳ ಬಿದ್ದು ಹಾಳಾಗಿವೆ. ಜಿಲ್ಲೆಯಲ್ಲಿ ಹಿಂಗಾರಿಗೆ 3796 ರೈತರು ನೋಂದಣಿಯಾಗಿದ್ದು, 2.95 ಲಕ್ಷ ಕಿಂಟ್ವಾಲ್ ಖರೀದಿಸಲು ಮಿತಿಯಿದೆ. ಈವರೆಗೂ 2928 ಕಿಂಟ್ವಾಲ್ ಮಾತ್ರ ಖರೀದಿಸಿದೆ.
ತಗ್ಗಿದ ಮಾರುಕಟ್ಟೆ ಬೆಲೆ : ಕಳೆದ ಜನವರಿ ತಿಂಗಳಲ್ಲಿ ಕಟಾವುಗೊಂಡಿದ್ದ ಜೋಳಕ್ಕೆ ಎಪಿಎಂಸಿ ಮಾರುಕಟ್ಟೆಯಲ್ಲಿ ಕಿಂಟ್ವಾಲ್‌ಗೆ 2800 ರಿಂದ 2900 ರೂ. ಬೇಡಿಕೆಯಿತ್ತು. ನೋಂದಣಿಯಲ್ಲಿ ಅಕ್ರಮ, ಸಂಗ್ರಹಿಸಲು ಗೋದಾಮುಗಳ ಕೊರತೆ, ಆಪಡೇಟ್‌ಯಾಗದ ಖರೀದಿ ತಂತ್ರಾಂಶ, ಸರ್ಕಾರದ ಖರೀದಿಗೆ ಮಿತಿ ಏರಿಕೆ ಸೇರಿದಂತೆ ವಿವಿಧ ಆಡಚಣೆಗಳಿಂದ ಬರೋಬ್ಬರಿ ಐದು ತಿಂಗಳೂ ಕಳೆದರೂ ಖರೀದಿ ಕೇಂದ್ರಗಳಲ್ಲಿ ಕೊಳ್ಳಲು ವಿಳಂಬ ಮಾಡಿತು. ಲಕ್ಷಾಂತರ ಕಿಂಟ್ವಾಲ್‌ನಷ್ಟು ಜೋಳ ನೋಂದಣಿಯಾಗುವ ಮುನ್ನವೇ ಮಿತಿ ಪೂರ್ಣಗೊಂಡಿತು. ಜೋಳವನ್ನು ಕಿಂಟ್ವಾಲ್‌ಗೆ ಎರಡು ಸಾವಿರ ದಿಂದ 2200 ರೂ. ಮಾರುಕಟ್ಟೆಯಲ್ಲಿ ಕೊಳ್ಳುತ್ತಿದ್ದಾರೆ. ದಿನೇದಿನ ಕಳೆದಂತೆ ಜೋಳಕ್ಕೆ ಹುಳುದ ಕಾಟದಿಂದ ಪುಡಿಯಾಗಲಿವೆ. ಅಲ್ಲದೆ, ಬಾಡಿಗೆ ಪಡೆದ ಗೋದಾಮುಗಳ ಬೆಲೆ ಏರಿಕೆ ಹಾಗೂ ಜೋಳ ಬೆಳೆಗಾಗಿ ಹೊರ ತಂದ ಕೈಸಾಲ ಹಾಗೂ ರಸಾಯನಿಕ ಗೊಬ್ಬರ, ಟ್ರಾಕ್ಟರ್ ಬಾಡಿಗೆದಾರರ ಹಾವಳಿ ಹೆಚ್ಚಿದ್ದು ದಲ್ಲಾಳಿಗಳ ಮೂಲಕ ಮಾರಾಟಕ್ಕೆ ಮುಂದಾಗಿದ್ದಾರೆ.
ಜೋಳ ರೈತರಿಗೆ ಹೊರೆ : ಖರೀದಿ ಕೇಂದ್ರಗಳಿಗೆ ರೈತರು ಜೋಳ ಹಾಕಲು ಮುಂದಾಗಿದ್ದಾರೆ. ಆದರೆ, ಅಧಿಕಾರಿಗಳು ಜೋಳಕ್ಕೆ ಹುಳು ಬಿದ್ದಿದ್ದು ಇದನ್ನು ಸಂಪೂರ್ಣವಾಗಿ ರೈಸ್ ಮಿಲ್‌ನಲ್ಲಿ ಕ್ಲೀನ್ ಮಾಡಿ ಐವತ್ತು ಕೆ.ಜಿ. ಪ್ಯಾಕೆಟ್ ಮಾಡಿ ಖರೀದಿ ಕೇಂದ್ರ ಹಾಕಿ ಎಂಬುದಾಗಿ ತಾಕೀತು ಮಾಡಿದ್ದಾರೆ. ಜೋಳದ ಪ್ರಮಾಣ ತಗ್ಗಲಿದ್ದು, ಕೂಲಿ ಕಾರ್ಮಿಕರ, ಸಾಗಣೆ, ರೈಸ್ ಮಿಲ್ ಹಾಗೂ ಹೊಸ ಗೋಣಿ ಚೀಲಕ್ಕೆ ವೆಚ್ಚದ ಹೊಣೆ ಸಂಪೂರ್ಣ ರೈತರದ್ದಾಗಿದೆ. ಸದ್ಯ, ರಾಜ್ಯ ಸರ್ಕಾರದಿಂದ ಹಣ ಪಾವತಿಯೂ ವಿಳಂಬವಾಗಲಿದೆ.
ಎಕರೆಗೆ 15 ಕಿಂಟ್ವಾಲ್ : ಹಿಂಗಾರಿನ ಹಂಗಾಮಿನ ಬೆಳೆದ ಜೋಳವನ್ನು ಎಕರೆಗೆ 20 ಕಿಂಟ್ವಾಲ್ ಖರೀದಿಸಲು ಸೂಚಿಸಿತ್ತು. ಜೋಳದ ಗುಣಮಟ್ಟದ ಕೊರತೆಯಿಂದ ಕೇಂದ್ರ ಸರ್ಕಾರ ಖರೀದಿಸಲು ನಿರಾಸಕ್ತಿ ವಹಿಸಿದ್ದರಿಂದ ರಾಜ್ಯ ಸರ್ಕಾರ ಎಕರೆ 15 ಕಿಂಟ್ವಾಲ್ ಖರೀದಿಸಲಿದೆ. ಸಂಗ್ರಹಣೆಗೆ ಮುನ್ನ ಕೇಂದ್ರ ಸರ್ಕಾರದ ಮಾರ್ಗಸೂಚಿನ್ವಯ ಧಾನ್ಯ ಗುಣಮಟ್ಟ ಪರಿಶೀಲಿಸಿ ದಾಸ್ತನು ಮಾಡಲಾಗುವುದು ಆದೇಶಿಸಿದೆ.
ಕೋಟ್..... ಜೋಳಕ್ಕೆ ಹುಳು ಬಿದ್ದಿರುವುದರಿಂದ ಕ್ಲೀನ್ ಮಾಡಿಕೊಂಡು ಖರೀದಿ ಕೇಂದ್ರಗಳಿಗೆ ತನ್ನಿ ಎಂಬುದಾಗಿ ರೈತರಿಗೆ ತಿಳಿಸಲಾಗಿದೆ.
- ಸಕೀನ, ಉಪನಿರ್ದೇಶಕಿ, ಆಹಾರ ಇಲಾಖೆ, ಬಳ್ಳಾರಿ.