ಬಳ್ಳಾರಿ ; ಇಲ್ಲಿನ ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ (ಬಿಮ್ಸ್)ನಲ್ಲಿ ವರ್ಷದಿಂದ ವರ್ಷಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಯಿಂದ ಚಿಕಿತ್ಸೆ ಪಡೆಯುವರ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗರಚನಾಶಾಸ್ತ್ರ ಅಭ್ಯಾಸಕ್ಕೆ ಮಾತ್ರ ಮೃತದೇಹಗಳ ಕೊರೆತೆಯಿದೆ.
ಭಾರತೀಯ ವೈದ್ಯಕೀಯ ಮಂಡಳಿಯ (ಐಎಂಸಿ) ನಿಯಮದ ಪ್ರಕಾರ, ವೈದ್ಯಕೀಯ 10 ವಿದ್ಯಾರ್ಥಿಗಳ ಅಧ್ಯಯನ ಹಾಗೂ ಸಂಶೋಧನೆ ಉದ್ದೇಶಕ್ಕೆ ಕನಿಷ್ಠವಾದರೂ ಒಂದು ಮೃತದೇಹ ಬೇಕು. ಬಿಮ್ಸ್‌ನಲ್ಲಿ ಪ್ರತಿ ವರ್ಷ 200 ವೈದ್ಯಕೀಯ ವಿದ್ಯಾರ್ಥಿಗಳು ಎಂಬಿಬಿಎಸ್‌ಗೆ ಪ್ರವೇಶ ಪಡೆಯುವರು. ಇದಕ್ಕೆ ಪ್ರತಿಯಾಗಿ ಕನಿಷ್ಠ 20 ಮೃತದೇಹಗಳು ಅಧ್ಯಯನಕ್ಕೆ ಇರಬೇಕಾಗಿತ್ತು. ಆದರೆ, ಸದ್ಯ ಆರು ಮೃತದೇಹಗಳಷ್ಟೇ ಇವೆ. 14 ಮೃತದೇಹಗಳು ಬೇಕಾಗಿವೆ. ಇದರಿಂದ ಆಳ ಅಧ್ಯಯನ, ಸಂಶೋಧನೆಗೆ ತಲೆಬುರುಡೆ ರಚನೆ ಕುರಿತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರು ತಿಳಿಸಿದರು ಕಷ್ಟವಾಗುತ್ತಿದೆ. ಎಂಬಿಬಿಎಸ್ ಅಂಗರಚನಾಶಾಸ್ತ್ರದ ವಿದ್ಯಾರ್ಥಿಗಳಿಗೆ ಅಧ್ಯಯನ ಬಹಳ ಮಹತ್ವದ್ದು. ಮನುಷ್ಯನ ದೇಹದ ಪ್ರತಿಯೊಂದು ಅಂಗದ ಬಗ್ಗೆ ವಿವರಿಸಿ, ಜ್ಞಾನ ನೀಡಲಾಗುತ್ತದೆ. ಮೃತದೇಹಗಳ ಕೊರತೆ ಉಂಟಾದರೆ ವಿದ್ಯಾರ್ಥಿಗಳ ಓದಿನ ಮೇಲೆ ಪರಿಣಾಮ ಉಂಟಾಗುತ್ತದೆ.
ಬಿಮ್ಸ್‌ಗೆ 2022ರಲ್ಲಿ ಒಂದು, 2023ರಲ್ಲಿ ಎರಡು, 2024ರಲ್ಲಿ ಎರಡು ಸೇರಿ ಈ ಮೂರು ವರ್ಷಗಳಲ್ಲಿ ಒಟ್ಟು ಐದು ಮೃತದೇಹಗಳು ಬಂದಿವೆ. ರಾಜ್ಯದಲ್ಲಿ ಮೃತದೇಹಗಳ ಕೊರತೆ ಎದುರಿಸುತ್ತಿರುವ ಪೈಕಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪೈಕಿ ಬಿಮ್ಸ್ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಕೊಡಗಿನ ವೈದ್ಯಕೀಯ ಸಂಸ್ಥೆಯಿದ್ದು 15 ಮೃತದೇಹಗಳ ಕೊರತೆ ಇದೆ. ಗದಗ ಹತ್ತು , ಬೀದರ್, ಚಿಕ್ಕಬಳ್ಳಾಪುರ, ಹಾವೇರಿಯಲ್ಲಿ ತಲಾ ಒಂಬತ್ತು, ಹಾಸನ, ಚಿಕ್ಕಮಗಳೂರು ತಲಾ ಏಳು , ಕೊಪ್ಪಳದ ವೈದ್ಯಕೀಯ ಸಂಸ್ಥೆಯಲ್ಲಿ ಆರು ಮೃತದೇಹಗಳ ಕೊರತೆ ಇದೆ.
ಒಂದು ಮೃತದೇಹ ಇಲ್ಲ : ರಾಜ್ಯದ ನಾಲ್ಕು ಸರ್ಕಾರಿ ಆರ್ಯುವೇದ ವೈದ್ಯಕೀಯ ಕಾಲೇಜಿಗಳಲ್ಲಿ ಒಂದಾದ ಇಲ್ಲಿನ ತಾರಾನಾಥ ಆರ್ಯುವೇದ ಕಾಲೇಜಿನಲ್ಲಿ ಕಳೆದ ಒಂದೂವರೆ ವರ್ಷದಿಂದ ಒಂದು ಮೃತದೇಹವಿಲ್ಲ. ಸದ್ಯ ವಿದ್ಯಾರ್ಥಿಗಳು ತಂತ್ರಜ್ಞಾನ ಆಧಾರಿತ ವರ್ಚುವಲ್ ಡಿಸೆಕ್ಷನ್ ಟೇಬಲ್ ಮೂಲಕ ಅಂಗಾಂಗ ರಚನಾಶಾಸ್ತ್ರ ಕಲಿಯುವಂತೆಯಾಗಿದೆ. ಈಗಾಗಲೇ ಬೆಳಗಾವಿಯ ಜಿಲ್ಲೆಯ ಬೈಲಹೊಂಗಲದ ಶ್ರೀರಾಮಣ್ಣ ಚಾರಿಟೇಬಲ್ ಟ್ರಸ್ಟ್ ಮೃತದೇಹವನ್ನು ನೀಡುವಂತೆ ಪತ್ರ ಬರೆಯಲಾಗಿದ್ದು, ಕೆಲವೇ ದಿನಗಳಲ್ಲೇ ಹಸ್ತಾಂತರಿಸಲಿದ್ದಾರೆ ಎಂದು ತಾರಾನಾಥ ಆರ್ಯುವೇದ ಕಾಲೇಜಿನ ವೈದ್ಯರೊಬ್ಬರು ತಿಳಿಸಿದರು.
ಮೊದಲ ಸ್ಥಾನ : ಅಂಗಾಂಗ ದಾನದಲ್ಲಿ ಜಿಲ್ಲೆ ದೇಶದಲ್ಲೇ ಮುಂಚೂಣಿಯಲ್ಲಿದೆ. 7,839 ರೀತಿಯ ಅಂಗಾಂಗ ದಾನಕ್ಕೆ ಬಳ್ಳಾರಿ ನಾಗರಿಕರು ನೊಂದಣಿ ಮಾಡಿದ್ದಾರೆ. ಆದರೆ, ದೇಹದಾನದಲ್ಲಿ ಮಾತ್ರ ಜಿಲ್ಲೆ ಹಿಂದೆ ಉಳಿದಿದೆ. ಇದಕ್ಕೆ ಪ್ರಮುಖವಾಗಿ ಧಾರ್ಮಿಕ ನಂಬಿಕೆ, ವಿಭಾಗದ ಮುಖ್ಯಸ್ಥರು ತರಗತಿ ಆರಂಭವಾಗುವ ಮುನ್ನವೇ ಮೃತದೇಹದ ಬಗ್ಗೆ ಜಾಗೃತಿ ಕೊರತೆ, ಹಕ್ಕು ಪಡೆಯದ ದೇಹಕ್ಕೆ ವೈದ್ಯರಿಂದ ಮರಣ ಪ್ರಮಾಣ ಪತ್ರ ನೀಡುವಲ್ಲಿ ತೊಡಕು ಹಾಗೂ ಪ್ರಾಧ್ಯಾಪಕರ ಕುಟುಂಬದಿಂದ ಮೃತದೇಹಗಳ ಹಸ್ತಾಂತರಿಸಲು ಹಿಂದೇಟು ಹಾಕುತ್ತಿದ್ದಾರೆ.
ಕೋಟ್..
ಕೋಟ್.. ಬಿಮ್ಸ್‌ನಲ್ಲಿ ಮೃತದೇಹಗಳ ಕೊರತೆ ನಿವಾರಿಸಲು ತಂತ್ರಜ್ಞಾನ ಆಧಾರಿತ ವರ್ಚುವಲ್ ಡಿಸೆಕ್ಷನ್ ಟೇಬಲ್ ಅನುಕೂಲವಾಗಿದೆ. ಸಂಬಂಧಪಟ್ಟ ಇಲಾಖೆಗೆ ಮೃತದೇಹಗಳ ಹಸ್ತಾಂತರಿಸಲು ಮನವಿ ಸಲ್ಲಿಸಲಾಗಿದೆ.
- ಡಾ.ಟಿ.ಗಂಗಾಧರಗೌಡ, ನಿರ್ದೇಶಕ, ಬಿಮ್ಸ್, ಬಳ್ಳಾರಿ.
ಕೋಟ್... ಜಿಲ್ಲೆಯಲ್ಲಿ ದೇಹ ದಾನ ಮಾಡುವವರು ಹಾಗೂ ತೆಗೆದುಕೊಳ್ಳುವವರ ನಡುವೆ ಸಂಪರ್ಕ ಕೊರತೆಯಿದೆ. ಅಲ್ಲದೆ, ವಿಭಾಗದ ಪ್ರಾಧ್ಯಾಪಕರಿಂದ ಮೃತದೇಹ ದಾನಗಳ ಜಾಗೃತಿ ಮಾಡುವಲ್ಲಿ ವಿಫಲರಾಗಿದ್ದಾರೆ. ಜನರ ಅನುಕೂಲಕ್ಕಾಗಿ ಸಹಾಯವಾಣಿ ತೆರೆದು ಮೂಡನಂಬಿಕೆಯನ್ನು ಹೋಗಲಾಡಿಸಬೇಕು. ಪ್ರಮುಖವಾಗಿ ವೈದ್ಯರ ಕುಟುಂಬದಿಂದಲೇ ಮೃತದೇಹ ದಾನ ಮಾಡಲು ಮುಂದಾಗಬೇಕು.
- ಮಹಾಂತೇಶ ರಾಮಣ್ಣನವರ್, ಕಾರ್ಯದರ್ಶಿ, ಶ್ರೀರಾಮಣ್ಣ ಚಾರಿಟೇಬಲ್ ಟ್ರಸ್ಟ್ , ಬೈಲಹೊಂಗಲ.