ಗುತ್ತಿಗೆ ಪಡೆದ ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿ ಹಾನಿ ಕಂಡು ರೈತ ಆತ್ಮಹತ್ಯೆ: ಕುರುಗೋಡಿನ ಬಾದನಹಟ್ಟಿಯಲ್ಲಿ ಘಟನೆ

26112021 Kurugodu formar suside
Published on

ಬಳ್ಳಾರಿ: ಅಕಾಲಿಕ ಮಳೆಗೆ ಮೆಣಸಿನಕಾಯಿ ಗಿಡಗಳು ಹಾನಿಯಾಗಿದ್ದರಿಂದ ಮನನೊಂದ ಕುರುಗೋಡು ತಾಲೂಕು ಬಾದನಹಟ್ಟಿ ಗ್ರಾಮದ ರೈತ ಗಾದಿಲಿಂಗ ಅಲಿಯಾಸ್ ದರೂರು (28) ಕ್ರಿಮಿನಾಶಕ ಸೇವಿಸಿ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಐದು ಎಕರೆ ಹೊಲವನ್ನು ಗುತ್ತಿಗೆ ಪಡೆದು ಮೆಣಸಿನಕಾಯಿ ಬೆಳೆದಿದ್ದರು. ಇದಕ್ಕಾಗಿ ಮನೆಯನ್ನು ಅಡಮಾನವಿಟ್ಟು ನಾಲ್ಕು ಲಕ್ಷ ರೂ. ಸಾಲ ಮಾಡಿದ್ದರು. ಗುರುವಾರ ಮಧ್ಯಾಹ್ನ ಕುಟುಂಬದೊಂದಿಗೆ ಹೊಲಕ್ಕೆ ಹೋಗಿದ್ದ ಗಾದಿಲಿಂಗ, ಹೆಂಡತಿ, ಮಕ್ಕಳನ್ನು ಅಲ್ಲೇ ಬಿಟ್ಟು, ಒಬ್ಬರೇ ಮನೆಗೆ ಬಂದು ಕ್ರಿಮಿನಾಶಕ ಸೇವಿಸಿದ್ದಾರೆ. ಕೂಡಲೇ ಕುರುಗೋಡು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್‌ಗೆ ಕರೆತರಲಾಗಿತ್ತು. ಆದರೆ, ಚಿಕಿತ್ಸೆ ಫಲಿಸಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net