ಕಂಪ್ಲಿ: ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಕಚೇರಿಯಲ್ಲಿ ವಿದ್ಯುತ್ ಗೆ ಸಂಬಂಧಿಸಿದ ಕುಂದು-ಕೊರತೆಗಳ ಕುರಿತು ಆಹವಾಲು ಸ್ವೀಕರಿಸಲು ಆ. 19 ರಂದು ಮಧ್ಯಾಹ್ನ 12 ಗಂಟೆಗೆ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ಸಭೆ ಆಯೋಜಿಸಲಾಗಿದೆ. ವಿದ್ಯುತ್ ಗ್ರಾಹಕರು ಭಾಗವಹಿಸಿ ತಮ್ಮ ದೂರುಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ