ಉಜ್ವಲ ಭವಿಷ್ಯಕ್ಕೆ ಉತ್ತಮ ಗುರಿ ಅಗತ್ಯ

22082022 kudalgi
Published on

ಕೂಡ್ಲಿಗಿ: ಭವಿಷ್ಯ ಉಜ್ವಲವಾಗಬೇಕಾದರೆ ವಿದ್ಯಾರ್ಥಿಗಳು ಉತ್ತಮ ಗುರಿ ಹೊಂದಿರಬೇಕು ಎಂದು ಶ್ರೀಮತಿ ಅಂಗಡಿ ವೀರಮ್ಮ ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಷಣ್ಮುಖನಗೌಡ ಹೇಳಿದರು.
ಕಾಲೇಜಿನ ಅಂತಿಮ ವರ್ಷದ ವಿಧ್ಯಾರ್ಥಿಗಳ ಬಿಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸೋಮವಾರ ಮಾತಾನಾಡಿದರು. ಹೆಚ್ಚಿನ ಅಂಕ ಗಳಿಕೆ ಜತೆ ಉತ್ತಮ ಸಂಸ್ಕಾರಗಳನ್ನೂ ಮೈಗೂಡಿಸಿಕೊಳ್ಳಬೇಕು. ಹೆತ್ತವರು, ಗುರುಗಳನ್ನು ಗೌರವಿಸಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಎಲ್ಲರಿಗೂ ಸರ್ಕಾರಿ ನೌಕರಿ ಅಸಾಧ್ಯ. ಸ್ವಂತ ಬಲದಿಂದ ನಾಲ್ವರಿಗೆ ಉದ್ಯೋಗ ನೀಡುವಂತೆ ಬೆಳೆಯಬೇಕು ಎಂದರು. ಕಾಲೇಜಿನ ನಿವೇಶನ ದಾನಿ ವೀರೇಶ್ ಅಂಗಡಿ ಚಾಲನೆ ನೀಡಿದರು. ನಿಂಗಪ್ಪ ಇತರರು ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net