ಬಳ್ಳಾರಿ : ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರು ಬಾ ಅಭಿಯಾನಕ್ಕೆ ಅ.8ರಂದು ಚಾಲನೆ ನೀಡಲಾಗುವುದು ಎಂದು ಕೆಆರ್‌ಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪ್ರಕಾಶ್ ರೆಡ್ಡಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜನರ ಬಳಿಗೆ ಹೋಗಲು ಎದ್ದೇಳು ಕನ್ನಡಿಗ, ಸಮೃದ್ಧ ಕರ್ನಾಟಕ ಕಟ್ಟಲು - ಕೆಆರ್‌ಎಸ್ ಪಕ್ಷ ಸೇರು ಬಾ, ಶಕ್ತಿ ಚೈತನ್ಯ ಪಡೆಯಲು ಹೆಸರಿನಲ್ಲಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದೆ. ಈಗಾಗಲೇ ಈ ಅಭಿಯಾನಕ್ಕೆ ಕನ್ನಡ ಪರ ಹೋರಾಟಗಾರ ಸಾ.ರಾ.ಗೋವಿಂದ್ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದಾರೆ. ರಾಜ್ಯ ಕಾರ್ಯಾಧ್ಯಕ್ಷರಾದ ರಘ ಜಾಣಗೆರೆ, ಉಪಾಧ್ಯಕ್ಷರಾದ ಎಸ್.ಮಂಜುನಾಥ ಹಾಗೂ ಕೆ.ಸೋಮಸುಂದರ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ. ಕೆ.ಸೋಮಸುಂದರ್ ಅವರ ನೇತೃತ್ವದ ತಂಡವು ಅ.8 ರಂದು ಜಿಲ್ಲೆಗೆ ಆಗಮಿಸಲಿದ್ದು, ಆ ದಿನದಂದೇ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಗುವುದು ಎಂದರು.
ರಾಜ್ಯ ಹಾಗೂ ಜಿಲ್ಲೆಯ ಜನರು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷವನ್ನು ಸೇರಿ ಸ್ಥಳೀಯವಾಗಿ ಮುಖಂಡತ್ವವನ್ನು ವಹಿಸಿಕೊಳ್ಳಲು ಮಂದಾಗಬೇಕು ಎಂದು ಕರೆ ನೀಡಿದರು. ಪಕ್ಷದ ಮುಖಂಡರಾದ ಶ್ರೀನಿವಾಸ್‌ರೆಡ್ಡಿ, ಮಂಜುನಾಥ, ಅನಿಫ್, ಯೂಸ್‌ಫ್ ಇದ್ದರು.