

ಕೊಟ್ಟೂರು: ಭಕ್ತರ ಆರಾಧ್ಯ ದೈವ ಕೊಟ್ಟೂರಿನ ಶ್ರೀ ಗುರುಬಸವೇಶ್ವರ ದೇವಸ್ಥಾನದ ‘ಸಪ್ತಪದಿ’ ಯೋಜನೆಯಡಿ ಗುರುವಾರ ಸಾಮೂಹಿಕ ವಿವಾಹ ನಡೆಯಿತು.
ದೇವಸ್ಥಾನದ ಹಿಂಭಾಗದ ಪ್ರಾಂಗಣದ ಮಂಟಪದಲ್ಲಿ ಬೆಳಗ್ಗೆ 9.50ಕ್ಕೆ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಐದು ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟವು.
ಧಾರ್ಮಿಕ ಧತ್ತಿ ಇಲಾಖೆಯ ಸಹಾಯಕ ಆಯುಕ್ತರೂ ಆದ ದೇವಸ್ಥಾನದ ಇಒ ಎಂ.ಎಚ್.ಪ್ರಕಾಶರಾವ್, ದೇವಸ್ಥಾನದ ಪ್ರಧಾನ ಧರ್ಮಕರ್ತ ಸಿ.ಎಚ್.ಎಂ.ಗಂಗಾಧರ ಇತರರು ಇದ್ದರು.