ಕೆಕೆಆರ್‌ಟಿಸಿ ಚಾಲಕ ಆತ್ಮಹತ್ಯೆ

Published on

ಬಳ್ಳಾರಿ ; ಅನಾರೋಗ್ಯದಿಂದ ಮನನೊಂದು ಚಾಲಕರೊಬ್ಬರು ಶುಕ್ರವಾರ ಬೆಳಗ್ಗೆ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಗಾವಿಯ ಸಂಕೇಶ್ವರ ಮೂಲದ ರಾಜು ದುಂಡಪ್ಪ ಪಾಟೀಲ (50) ಮೃತ. ಕೆಕೆಆರ್‌ಟಿಸಿಯ ಬಳ್ಳಾರಿ ವಿಭಾಗದ ಡಿಪೋ- 2ರಲ್ಲಿ ಚಾಲಕರಾಗಿ ಇಲ್ಲಿನ ದೇವಿನಗರದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದರು. ಇತ್ತೀಚಿಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದೇ ವಿಚಾರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net