ಬಳ್ಳಾರಿ : ಸಂಡೂರಿನ ಆದರ್ಶ ಕಲ್ಯಾಣ ಮಂಟಪದಲ್ಲಿ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ಜೂ 29 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಪತ್ರ ಹೊರಡಿಸಿದ್ದಾರೆ.
ಪರಿಷತ್ತಿನ ನಿಬಂಧನೆ (ಬೈಲಾ) ತಿದ್ದುಪಡಿ ಉದ್ದೇಶದಿಂದ ಸರ್ವ ಸದಸ್ಯರ ವಿಶೇಷ ಸಾಮಾನ್ಯ ಸಭೆಯೂ ಕಳೆದ ಏ 27ರಂದು ಸಂಡೂರಿನ ನಂದಿಹಳ್ಳಿಯಲ್ಲಿ ನಿಗದಿಯಾಗಿತ್ತು. ಕೆಲ ಸದಸ್ಯರಿಂದ ಅಕ್ಷೇಪ ವ್ಯಕ್ತವಾದ ಕಾರಣದಿಂದ ಸಭೆ ಮುಂದೂಡಲಾಗಿತ್ತು.