ವಿಶ್ವ ಸಾಹಿತ್ಯಕ್ಕೆ ಕನ್ನಡಿಗರ ಕೊಡುಗೆ ಅಪಾರ

Published on

ಬಳ್ಳಾರಿ : ವಿಶ್ವ ಸಾಹಿತ್ಯಕ್ಕೆ ಕನ್ನಡ ಭಾಷೆಯ ಕೊಡುಗೆ ಅಪಾರವಾಗಿದೆ ಎಂದು ವಿಎಸ್‌ಕೆ ವಿವಿ ಪ್ರೊ.ಶಾಂತನಾಯಕ್ ಹೇಳಿದರು.

ಇಲ್ಲಿನ ಬಿಪಿಎಸ್‌ಸಿ ಸಭಾಂಗಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಘಟಕ, ಸಂಸ್ಕಾರ ಭಾರತಿ, ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಇತ್ತೀಚಿಗೆ ಆಯೋಜಿಸಿದ್ದ ಎಸ್.ಎಲ್.ಭೈರಪ್ಪನವರ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಸ್.ಎಲ್.ಭೈರಪ್ಪ ಅವರು ಕಾದಂಬರಿ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದವರು. ಅವರ ಕಾದಂಬರಿಗಳಲ್ಲಿ ಪೌರಾಣಿಕ ಸಂಗತಿಯನ್ನು ಇತಿಹಾಸದ ಕನ್ನಡಿಯಲ್ಲಿಟ್ಟು ನೋಡುತ್ತಾರೆ. ಹಾಗಾಗಿ ಅವರ ಕಾದಂಬರಿಗಳು ಓದುಗರಿಗೆ ಅಪ್ಯಾಯಮಾನವಾಗಿವೆ. ಉದಯೋನ್ಮುಖ ಕವಿಗಳಿಂದ ಕನ್ನಡ ಸಾಹಿತ್ಯ ಇನ್ನಷ್ಟು ಶ್ರೀಮಂತಗೊಳ್ಳಲಿ ಎಂದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ ಮಾತನಾಡಿ, ಸುಪ್ತ ಪ್ರತಿಭೆಯನ್ನು ಮುನ್ನೆಲೆಗೆ ತರುವ ಹಾಗೂ ಅಗಲಿದ ಮಹಾನ್ ಚೇತನಗಳಿಗೆ ನುಡಿ ನಮನ ಸಲ್ಲಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾರ್ಯಗಳನ್ನು ಆಯೋಜಿಸುವ ಆಶಯವನ್ನು ಘಟಕ ಹೊಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net