

ಬಳ್ಳಾರಿ : ಕನ್ನಡ ಅನ್ನ ಕೊಡುವ ಭಾಷೆ ಈ ನೆಲದಲ್ಲಿ ಒಂದೊತ್ತು ಊಟ ಮಾಡುತ್ತಿದ್ದರೆ. ಅದಕ್ಕೆ ಕಾರಣ ತಾಯಿ ಭುವನೇಶ್ವರಿಯ ಕೃಪೆ ಎಂದು ಶಾಸಕ ನಾರಾ ಭರತರೆಡ್ಡಿ ಹೇಳಿದರು.
ಇಲ್ಲಿನ ಕನಕ ದುರ್ಗಮ್ಮ ದೇವಸ್ಥಾನದ ವೃತ್ತದಲ್ಲಿ ವಿವೇಕಾನಂದ ಕನ್ನಡ ಯುವಕ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ತೆಲುಗು ಭಾಷಿಕರಿದ್ದಾರೆ ಪಕ್ಕದ ರಾಜ್ಯದಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಕನ್ನಡಿಗರು- ಪರ ಭಾಷಿಕರು ನಾವೆಲ್ಲರೂ ಸೌಹಾರ್ದತೆಯಿಂದ ಇದ್ದೇವೆ ಎಂದರು.
ತಾಯಂದಿರು ಮಕ್ಕಳಿಗೆ ಕನ್ನಡ ಕಲಿಸಬೇಕು. ಕೆಲವರು ಮಾತೃ ಭಾಷೆಯ ಕಲಿಕೆಯ ಬಗ್ಗೆ ಮುಜುಗರ ತೋರುತ್ತಾರೆ. ಆ ಮುಜುಗರ ಬಿಟ್ಟು ಮಕ್ಕಳಿಗೆ ಕನ್ನಡ ಕಲಿಸಲು ಆಸಕ್ತಿ ವಹಿಸಬೇಕು. ಮಕ್ಕಳು ಕನ್ನಡ ಕಲಿತು ಜಗತ್ತನ್ನ ಬೆಳಗಲಿ ಎಂದು ಆಶಿಸಿದರು.