ಕನ್ನಡ ವೈಜ್ಞಾನಿಕವಾಗಿ ಬೆಳೆಸಬೇಕಿದೆ

01 yerriswamy 07
Published on

ಬಳ್ಳಾರಿ : ಕನ್ನಡತನವನ್ನು ಬೆಳೆಸಬೇಕಾದರೆ ವೈಚಾರಿಕ ಮತ್ತು ವೈಜ್ಞಾನಿಕ ಲೇಪನದೊಂದಿಗೆ ಬಳಸಿದಾಗ ಕನ್ನಡವು ತಾನೇತಾನಾಗಿ ಬೆಳೆಯುತ್ತದೆ ಎಂದು ವಿಎಸ್‌ಕೆ ವಿವಿ ಕುಲಸಚಿವ ಎಸ್.ಎನ್.ರುದ್ರೇಶ್ ಹೇಳಿದರು.

ಇಲ್ಲಿನ ವಿಎಸ್‌ಕೆ ವಿವಿಯಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಭಾಷೆ ಹಾಗೂ ಕನ್ನಡ ನಾಡು ಬೆಳೆಸುವ ಅಭಿಮಾನಿಗಳಾಗಬೇಕು. ಕನ್ನಡ ಭಾಷೆ ಹಾಗೂ ವ್ಯವಹಾರದಲ್ಲಿ ಸ್ಥಳೀಯ ಪದಗಳನ್ನೇ ಬಳಸಿಕೊಂಡು ಕನ್ನಡಿಗರು ವಿಶಾಲ ಹೃದಯವಂತರಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net