ಕನಕದಾಸರು ನ್ಯಾಯ‌ ಸಾಹಿತ್ಯದ ಪ್ರತೀಕ

Published on

ಬಳ್ಳಾರಿ : ಭಕ್ತ ಶ್ರೇಷ್ಠ ಕನಕದಾಸರ ಕೀರ್ತನೆಗಳೂ ಇಂದಿಗೂ ಜನ ಸಾಮಾನ್ಯರಲ್ಲಿ ಅಚ್ಚಳಿಯದೇ ಮನಸೂರೆಗೊಂಡಿವೆ. ಕನಕದಾಸರು ನ್ಯಾಯ ಸಾಹಿತ್ಯದ ಪ್ರತೀಕವಾಗಿದ್ದಾರೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಸೋಮವಾರ ನಡೆದ ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅತ್ಯಂತ ಉತ್ಸುಕತೆಯಿಂದ ಕನಕ ದಾಸರ ಜಯಂತಿ ಆಚರಣೆ ಮಾಡಲಾಗುತ್ತಿದೆ. ಹಾಲುಮತ ಸಮಾಜದವರು ಹಾಲಿನಂತೆ ಶುಭ್ರತೆವುಳ್ಳ, ಮೃದು ಸ್ವಭಾವ ಹಾಗೂ ಕನಕ ದಾಸರರಂತೆ ಪಾವಿತ್ರತ್ಯೆ ಮನಸ್ಸು ಹೊಂದಿದವರು ಎಂದರು. ಸಂಗೊಳ್ಳಿ ರಾಯಣ್ಣನವರನ್ನೂ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ, ಇಡೀ ದೇಶವೇ ಮೆಚ್ಚುವ ಮಹಾನ್ ಸ್ವಾತಂತ್ರ್ ಹೋರಾಟಗಾರರಾಗಿದ್ದು, ರಾಯಣ್ಣನವರ ಧೈರ್ಯ, ಶೌರ್ಯ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.

ನಗರದ ಸರ್ಕಾರಿ(ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಸುಂಕಪ್ಪ ಮಾತನಾಡಿ, ದಾಸ ಶ್ರೇಷ್ಠ ಕನಕದಾಸರು ಭಾವನ ಜೀವಿಯಾಗಿದ್ದರು. ಸಂದಿಘ್ನ ಪರಿಸ್ಥಿತಿಯಲ್ಲಿಯೂ ಮನುಷ್ಯತ್ವ ಪರವಾಗಿ ಕಾಳಜಿ ಹೊಂದಿದ್ದು, ಅವರು ಕೀರ್ತನೆ ಸಾಹಿತ್ಯಕ್ಕೆ ಪುಷ್ಠಿ ನೀಡಿ ಮಹಾನ್ ಸಾಧಕರೆಂದು ಪರಿಗಣಿಸಿದ್ದಾರೆ ಎಂದು ಹೇಳಿದರು.

ಕನಕದಾಸರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳು ಹಾಗೂ ವಾದ್ಯಗಳೊಂದಿಗೆ ಶ್ರೀ ಕನಕ ವೃತ್ತದಿಂದ ಆರಂಭವಾದ ಮೆರವಣಿಗೆಯು ಎಸ್ಪಿ ವೃತ್ತದಿಂದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆವರೆಗೆ ತಲುಪಿ ಸಂಪನ್ನ ಗೊಂಡಿತು. ಭಕ್ತ ಕನಕದಾಸರ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net