ಮನಸೆಳೆದ ಛದ್ಮವೇಷಧಾರಿ ಮಕ್ಕಳು

18082022 kmp sri
Published on

ಕಂಪ್ಲಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಲ್ಲಿನ ಚೇತನ ವಿದ್ಯಾ ನಿಕೇತನ ಶಾಲೆಯಲ್ಲಿ ಗುರುವಾರ ಶಾಲಾ ಮಕ್ಕಳು ರಾಧಾ ಕೃಷ್ಣ ಛದ್ಮವೇಷಧರಿಸಿ ಪ್ರದರ್ಶಿಸಿದರು. ಶಾಲೆ ಮುಖ್ಯಶಿಕ್ಷಕಿ ಜಿ.ಜಯಲಕ್ಷ್ಮಿ ಶ್ರೀನಿವಾಸ್ ಮಾತನಾಡಿ, ಮಕ್ಕಳಲ್ಲಿ ರಾಧಾ ಕೃಷ್ಣರ ತತ್ವ ಆದರ್ಶಗಳನ್ನು ಪ್ರೇರೇಪಿಸಲು ರಾಧಾ ಕೃಷ್ಣ ಛದ್ಮವೇಷ ಧರಿಸಿದ್ದಾರೆ. ಭಗವದ್ಗೀತೆ ಶ್ಲೋಕಗಳ ಪಠಣ, ಕೋಲಾಟ, ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಧಾ, ಕೃಷ್ಣರಾಗಿ ಸಂತಸದಿಂದ ಪಾಲ್ಗೊಂಡಿದ್ದಾರೆ ಎಂದರು. ಶಿಕ್ಷಕ ವರ್ಗದ ಸುಲೋಚನಾ, ಗೀತಾ, ಪಕ್ಕೀರೇಶ್, ನಾಗರಾಜ್, ಅಭಿಷೇಕ್, ಜ್ಯೋತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net