ಧನಾತ್ಮಕ ಆಲೋಚನಾ ಶಕ್ತಿ ರೂಢಿಸಿಕೊಳ್ಳಿ

18082022 kmp health
Published on

ಕಂಪ್ಲಿ: ಪೌಷ್ಟಿಕ ಆಹಾರ ಸೇವನೆ, ನಿತ್ಯ ದೀರ್ಘ ನಡಿಗೆ, ಯೋಗಾಭ್ಯಾಸದಿಂದ ರೋಗಗಳನ್ನು ತಡೆಯಬಹುದು ಎಂದು ಕರ್ನೂಲಿನ ಹೃದಯರೋಗ ತಜ್ಞ ಡಾ.ಟಿ.ರವಿಕುಮಾರ್ ಹೇಳಿದರು.
ಇಲ್ಲಿನ ಮಾರುತಿನಗರದ ಸಮುದಾಯಭವನದಲ್ಲಿ, ಕಂಪ್ಲಿಯ ಕಿಸಾನ್ ಜಾಗೃತಿ ವಿಕಾಸ್ ಸಂಘ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ನಾನಾ ರೋಗಗಳ ಉಚಿತ ತಪಾಸಣಾ ಶಿಬಿರಕ್ಕೆ ಗುರುವಾರ ಚಾಲನೆ ನೀಡಿ, ನಿತ್ಯ ಜೀವನದಲ್ಲಿ ಆರೋಗ್ಯಕರ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಧನಾತ್ಮಕ ಆಲೋಚನಾ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಂಪ್ಲಿಯ ಕಿಸಾನ್ ಜಾಗೃತಿ ವಿಕಾಸ್ ಸಂಘದ ಅಧ್ಯಕ್ಷ ಪಿ.ಯುಗಂಧರನಾಯ್ಡು ಅಧ್ಯಕ್ಷತೆವಹಿಸಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರು, ಬಡಜನತೆಯ ಅನುಕೂಲಕ್ಕಾಗಿ ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹೇಳಿದರು.
ವೈದ್ಯರಾದ ರವೀಂದ್ರ ಕನಕೇರಿ, ಮಲ್ಲೇಶಪ್ಪ, ಹೇಮಂತ್, ಕೃಷ್ಣಮೂರ್ತಿ, ಆದರ್ಶ, ಸಂಜಯ್ ತಂಡ 260ಕ್ಕೂ ಹೆಚ್ಚು ಹೃದಯ, ನರ, ಮೂತ್ರಪಿಂಡ, ಕ್ಯಾನ್ಸರ್ ನಾನಾ ರೋಗಿಗಳನ್ನು ತಪಾಸಣೆ ಮಾಡಿದರು. ಶಿಬಿರದಲ್ಲಿ ಬಿಪಿ, ಶುಗರ್, ರಕ್ತಪರೀಕ್ಷೆ, ಇಸಿಜಿ/2ಡಿ, ಎಕೋ ಸ್ಕ್ಯಾನಿಂಗ್ ಮೊದಲಾದ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು. ಕಾರ್ಯಕ್ರಮದ ನಿರ್ದೇಶಕ ರಾಜೇಶ್, ಕಿಸಾನ್ ಜಾಗೃತಿ ವಿಕಾಸ್ ಸಂಘದ ಜಿಲ್ಲಾಧ್ಯಕ್ಷ ಕೆ.ಕೃಷ್ಣ. ಪದಾಧಿಕಾರಿಗಳಾದ ಗುಬಾಜಿ ರಾಮಾಂಜಿನಿ, ಬಲಕುಂದೆಪ್ಪ, ಎಚ್.ವಿರೂಪಾಕ್ಷಿ, ರಾಮು, ಬಸವರಾಜ್, ನಾಗಪ್ಪ, ತಾಪಂ ನರೇಗ ಕಾರ್ಯಕರ್ತೆ ಎಸ್.ಎಂ.ಪವಿತ್ರಾ, ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸವರಾಜ, ಔಷಧ ತಂತ್ರಜ್ಞ ಶಿವರುದ್ರ, ಆಶಾ ಕಾರ್ಯಕರ್ತೆಯರಾದ ಯು.ಪದ್ಮಾವತಿ, ಜಿ.ಅನಿತಾ, ಸರಸ್ವತಿ, ಎಸ್.ಲಕ್ಷ್ಮಿ, ಜಯಲಕ್ಷ್ಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net