ಜೂನ್ ತಿಂಗಳ ಪೂರ್ತಿ ಕೆಎಂಎಫ್‌ನಿಂದ ಹೆಚ್ಚುವರಿ ಹಾಲು ಉಚಿತ: ರಾಬಕೊ ಒಕ್ಕೂಟದ ಎಂಡಿ ಮಾಹಿತಿ

31052021 Bellary KMF
Published on

ಬಳ್ಳಾರಿ: ವಿಶ್ವ ಹಾಲು ದಿನಾಚರಣೆ ನಿಮಿತ್ತ ಕೆಎಂಎಫ್ ಹೆಚ್ಚು ಹಾಲು ಕುಡಿಯಿರಿ ಎಂಬ ಕಾರ್ಯಕ್ರಮದಡಿ ಜೂನ್ ತಿಂಗಳ ಪೂರ್ತಿ ಎಲ್ಲ ಮಾದರಿಯ ಹಾಲಿನ ಪ್ರತಿ ಲೀಟರ್‌ಗೆ 40 ಎಂಎಲ್ ಹಾಗೂ ಅರ್ಧ ಲೀಟರ್‌ಗೆ 20 ಎಂಎಲ್ ಹಾಲನ್ನು ಹೆಚ್ಚುವರಿ ಉಚಿತವಾಗಿ ಗ್ರಾಹಕರಿಗೆ ಪೂರೈಸಲಾಗುತ್ತದೆ ಎಂದು ರಾಬಕೊ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಬಳ್ಳಾರಿ ಹಾಲು ಒಕ್ಕೂಟವು ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಕಾರ್ಯ ವ್ಯಾಪ್ತಿ ಹೊಂದಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ದಿನಗಳಲ್ಲಿ ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಹೆಚ್ಚುವರಿ ಹಾಲನ್ನು ಜೂ.1 ರಿಂದ 30ರವರೆಗೆ ಪೂರೈಸಲಾಗುತ್ತದೆ. ಹಾಲಿನ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net