ಬಳ್ಳಾರಿ : ಯುವಕರು ದುಶ್ಚಟಗಳಿಂದ ದೂರವಿದ್ದು, ಅಭಿವೃದ್ಧಿಯ ರೂವಾರಿಗಳಬೇಕು. ನಶೆ ಮುಕ್ತ ಭಾರತಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.
ಇಲ್ಲಿನ ಕನಕದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ನಶೆ ಮುಕ್ತ ಭಾರತದೊಂದಿಗೆ ಮಹಾತ್ವಕಾಂಕ್ಷಿಯ ನಮೋ ಯುವ ರನ್( ನಮೋ ಮ್ಯಾರಾಥನ್)ಗೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ದುಷ್ಕರ್ಮಿಗಳಿಂದ ನಡೆಯುತ್ತಿರುವ ಮಾದಕದಿಂದ ಜೀವನ ಹಾಳಾಗುತ್ತಿದೆ. ಆದ್ದರಿಂದ, ಮಾದಕ ವ್ಯಸನದಿಂದ ಯುವಕರನ್ನು ಹೊರತರಲು ಈ ಮ್ಯಾರಾಥನ್ ಮೂಲಕ ಅರಿವು ಮೂಡಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಸಂಕಲ್ಪದಂತೆ ಯುವಕರು ದೇಶದ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದು ಕರೆ ನೀಡಿದರು. ಇಲ್ಲಿನ ದುರ್ಗಮ್ಮ ದೇವಸ್ಥಾನದಿಂದ ಆರಂಭಗೊಂಡ ಮ್ಯಾರಾಥನ್ ಮೋತಿ ವೃತ್ತದವರೆಗೆ ಸಾಗಿ ಮುಕ್ತಾಯಗೊಂಡಿತು.