ಜೋಗದಲ್ಲಿ ಬೀಜಯಜ್ಞ ಯಾಗ: ಅಮ್ಮಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎನ್.ರುದ್ರಗೌಡ ಮಾಹಿತಿ

Rudragouda Amma Institute ballari
ರುದ್ರಗೌಡ, ಪ್ರಧಾನ ಕಾರ್ಯದರ್ಶಿ, ಅಮ್ಮಾ ಸಂಸ್ಥೆ, ಬಳ್ಳಾರಿ.
Published on

ಬಳ್ಳಾರಿ: ಸಂಡೂರು ತಾಲೂಕಿನ ಜೋಗ ಗ್ರಾಮದಲ್ಲಿ ಅಮ್ಮಾ ಸಂಸ್ಥೆಯಿಂದ ಬೀಜಯಜ್ಞ (ರೈತ ಸಂಜೀವಿನಿ)ಯಾಗ ಹಮ್ಮಿಕೊಳ್ಳಲಾಗಿದೆ ಎಂದು ಅಮ್ಮಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎನ್.ರುದ್ರಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಈ ಯಾಗಕ್ಕೆ ಇನ್ನು ದಿನಾಂಕ ನಿಗದಿ ಮಾಡಿಲ್ಲ. ಈ ಯಾಗವನ್ನು ಪೂರ್ವಜರ ಕಾಲದ ರಾಜಾಧಿರಾಜರು ಲೋಕ ಕಲ್ಯಾಣಕ್ಕಾಗಿ ನಡೆಸುವ ಒಂದು ಪವಿತ್ರ ಸಂಕಲ್ಪ. ರೈತರು ಭೂಮಿಯಲ್ಲಿ ಬಿತ್ತನೆ ಮಾಡುವ ಬರದಲ್ಲಿ ಭೂಮಿಯಲ್ಲಿರುವ ಕೋಟ್ಯಂತರ ಜೀವಕೋಶಗಳ ನಾಶವಾಗುತ್ತವೆ. ಆ ಕಾರಣ ಶಾಪದಿಂದ ರೈತರಿಗೆ ಉತ್ತಮವಾದ ಬೆಳೆಯೂ ಬರುವುದಿಲ್ಲ. ಒಂದು ವೇಳೆ ಬಂದರೂ ಅತಿವೃಷ್ಟಿ, ಅನಾವೃಷ್ಟಿಗೆ ಬೆಳೆಗಳು ತುತ್ತಾಗಿ ರೈತರಿಗೆ ಕನಿಷ್ಠ ಬೆಲೆಯೂ ಸಿಗುವುದಿಲ್ಲ. ಹೀಗಾಗಿ ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಬಹಳ. ಅದರೆ, ನಮ್ಮ ರೈತರಿಗೆ ಇದರ ಬಗ್ಗೆ ತಿಳಿದಿಲ್ಲ. ಭೂ ದೇವಿಗೆ ಬೀಜಯಜ್ಞ ಯಾಗದ ಪೂಜೆಯನ್ನು ನಡೆಸಿ ಮಂತ್ರೋಚ್ಛಾರದ ಮೂಲಕ ಭೂ ದೇವಿಗೆ ಶಾಂತಿಯನ್ನು ಮಾಡುತ್ತಿದ್ದೇವೆ. ಈ ಯಾಗಕ್ಕೆ ಒಂದು ಲಕ್ಷ ರೂ.ವೆಚ್ಚವಾಗಲಿದ್ದು, ಸಂಸ್ಥೆ ವ್ಯಯಿಸಿಲಿದೆ ಎಂದರು.

ಸಂಸ್ಥೆಯ ಅಧ್ಯಕ್ಷೆ ಎಂ.ಕವಿತಾ, ಸದಸ್ಯರಾದ ಜಿ.ರಾಘವೇಂದ್ರ, ಆರ್.ಶಿವಪ್ರಸಾದ, ಶಂಕರಮೂರ್ತಿ, ಅಜ್ಜಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net