ಜೀನ್ಸ್ ಘಟಕಗಳು ಮುಚ್ಚುವ ಭೀತಿ

Published on

ಬಳ್ಳಾರಿ ; ಇಲ್ಲಿನ ಜೀನ್ಸ್ ವಾಷಿಂಗ್ ಘಟಕಗಳಿಂದ ಕಲುಷಿತ ನೀರನ್ನು ಸಂಸ್ಕ್ರರಿಸಿದೇ ನೇರವಾಗಿ ಜಲಮೂಲಗಳಿಗೆ ಹರಿಸಿದ ಪರಿಣಾಮ, ಪರಿಸರ ಮತ್ತು ಜಲಮೂಲಗಳ ಮಾಲಿನ್ಯಕ್ಕೆ ಕಾರಣವಾಗಿದ್ದು ಘಟಕಗಳನ್ನು ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣಾ ಮಂಡಳಿ (ಕೆಎಸ್‌ಪಿಸಿಬಿ) ಜಿಲ್ಲಾ ಕಚೇರಿಯೂ ಕೇಂದ್ರ ಕಚೇರಿಗೆ ವರದಿ ನೀಡಿದೆ.

ಕಲುಷಿತ ನೀರು ಸಂಸ್ಕರಣಾ ಘಟಕಗಳನ್ನು (ಇಟಿಪಿ) ಸ್ಥಾಪಿಸಿಕೊಳ್ಳದಿರುವುದೇ ಇದಕ್ಕೆಲ್ಲ ಮೂಲ ಕಾರಣ. ಕಡೆಗೆ ಎಲ್ಲ ಘಟಕಗಳೂ ಸೇರಿ ಸಾಮಾನ್ಯ (ಒಂದೇ) ಸಂಸ್ಕರಣಾ ಘಟಕವನ್ನಾದರೂ(ಸಿಇಟಿಪಿ) ಆರಂಭಿಸಬೇಕಿತ್ತು. ಆದರೆ, ಅದನ್ನು ಮಾಡಿಲ್ಲ. ಇದರಿಂದ ಕೇಂದ್ರ ಕಚೇರಿಯೂ ಕೆಲವೇ ದಿನಗಳಲ್ಲಿ ಡೈಯಿಂಗ್ ಘಟಕಗಳು ಮುಚ್ಚುವ ಆದೇಶ ಹೊರಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇಲ್ಲಿನ ಮಂಡ್ರಗಿ ಕೈಗಾರಿಕಾ ಪ್ರದೇಶದಲ್ಲಿ ಆರಂಭದಲ್ಲಿ 64 ಜೀನ್ಸ್ ಘಟಕಗಳಿಗೆ ಅನುಮತಿ ನೀಡಲಾಗಿತ್ತು. ಇಟಿಪಿಯನ್ನು ಮಾಡಿಕೊಳ್ಳದ ಕಾರಣದಿಂದ ಈಗಾಗಲೇ 16 ಘಟಕಗಳನ್ನು ಮುಚ್ಚಿಸಲಾಗಿದೆ. ಇನ್ನೂ ಹತ್ತು ಘಟಕಗಳು ನಷ್ಟದ ಭೀತಿಯಿಂದ ಮುಚ್ಚಲಾಗಿದೆ. ಸದ್ಯ 36 ಘಟಕಗಳಿಗೆ ಹಲವು ಹಂತದ ನೋಟಿಸ್ ನೀಡಲಾಗಿದ್ದು ಸ್ಥಗಿತದ ಆದೇಶ ಹೊರಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net