ಗಣಿನಾಡಿಗೆ ಬಂದ ಜನಾರ್ದನ ರೆಡ್ಡಿ: ಬಳ್ಳಾರಿ ಮನೆಯಲ್ಲಿ ವರಮಹಾಲಕ್ಷ್ಮೀ ಪೂಜೆಯಲ್ಲಿ ಭಾಗಿ

20082021 Janardhan reddy
Published on

ಬಳ್ಳಾರಿ: ಸುಪ್ರೀಂಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ತುರ್ತು ಸಂದರ್ಭ ಹೊರತುಪಡಿಸಿ ಒಂದು ದಶಕದ ಬಳಿಕ ಶುಕ್ರವಾರ ಬಳ್ಳಾರಿಗೆ ಬಂದಿದ್ದಾರೆ. ನಗರದ ಸಿರಗುಪ್ಪ ರಸ್ತೆಯ ಅವರ ನಿವಾಸದಲ್ಲಿ ವರಮಹಾಲಕ್ಷ್ಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾದರು.

ಕೋರ್ಟ್ ಗೈಡ್‌ಲೈನ್ಸ್ ಪ್ರಕಾರ ಎಸ್ಪಿಗೆ ಮಾಹಿತಿ ನೀಡಿರುವ ರೆಡ್ಡಿ ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ರೆಡ್ಡಿ ಪುತ್ರಿ ಬ್ರಹ್ಮಿಣಿ ಕೂಡಾ ಹೈದರಾಬಾದ್‌ನಿಂದ ವಿಶೇಷ ವಿವಾನದಲ್ಲಿ ಬಳ್ಳಾರಿಗೆ ಆಗಮಿಸಿದ್ದು, ಪೂಜೆಯಲ್ಲಿ ರೆಡ್ಡಿ ಕುಟುಂಬ ಸದಸ್ಯರೆಲ್ಲ ಭಾಗಿಯಾಗಿದ್ದಾರೆ. ವರಮಹಾಲಕ್ಷ್ಮೀ ಪೂಜೆ ರೆಡ್ಡಿಯವರ ರಾಜಕೀಯ ಉನ್ನತಿಗೆ ಕಾರಣವಾಗಿದ್ದರಿಂದ ಮಹತ್ವದ್ದಾಗಿದೆ.

ಹಿಂದೆ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಸಹ ಭಾಗವಹಿಸುತ್ತಿದ್ದರು. ಕಳೆದೊಂದು ದಶಕದಿಂದ ರೆಡ್ಡಿ ಮನೆಯಲ್ಲಿ ಹಬ್ಬದ ವಾತಾವರಣವಿರಲಿಲ್ಲ. ಆದರೆ, ವರಮಹಾಲಕ್ಷ್ಮೀ ಹಬ್ಬದ ದಿನವೇ ರೆಡ್ಡಿ ಬಳ್ಳಾರಿಗೆ ಬಂದಿದ್ದು, ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net