ಜನಾಕ್ರೋಶ ಯಾತ್ರೆ ಮೇ 09

Published on

ಬಳ್ಳಾರಿ ; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೈಗೊಂಡಿರುವ ಜನಾಕ್ರೋಶ ಯಾತ್ರೆಯು ಮೇ.9 ರಂದು ನಗರದ ನಟರಾಜ್ ಚಿತ್ರಮಂದಿರ ಮುಂಭಾಗದಲ್ಲಿ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜನಾಕ್ರೋಶ ಯಾತ್ರೆಯ ಪತ್ರಿಟನಾ ಸಮವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋದ ಪಕ್ಷದ ನಾಯಕ ಆರ್.ಅಶೋಕ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಿ.ಟಿ.ರವಿ ಸೇರಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿಭಟನೆಗೆ ಹತ್ತು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಬಹುದು. ಸಮಾವೇಶ ಬಳಿಕ ರಾಯಲ್ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್‌ಪೇಟೆ ಮೂಲಕ ಮೋತಿ ವೃತ್ತದವರೆಗೆ ಬೃಹತ್ ರ‌್ಯಾಲಿ ನಡೆಯಲಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಯ್‌ಕ್ಷ ಅನಿಲ್ ಕುಮಾರ್ ಮೋಕಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಏ.30 ರಂದು ಸಂಪುಟ ಸಭೆಯಲ್ಲಿ ಜಾತಿಗಣತಿ ನಿರ್ಣಯ ತೆಗೆದುಕೊಂಡಿರುವುದು ಸ್ವಾಗತಾರ್ಹ. ಜಾತಿಗಣತಿ ಮಾಡಬೇಕೆಂದು ಈ ಹಿಂದೆ ಬಿಜೆಪಿ ಪಕ್ಷ ಒತ್ತಾಯಿಸಿತ್ತು. ಈ ಹಿಂದೆ ಇದ್ದಂತಹ ಕಾಂಗ್ರೆಸ್ ಸರ್ಕಾರ ಅಸಡ್ಡೆ ತೋರುತಾ ಬರುತ್ತಿದೆ. ಜಾತಿಗಣತಿಯನ್ನು ರಾಜ್ಯ ಸರ್ಕಾರ ಮಾಡಲು ಬಾರವುದಿಲ್ಲ. ಸುಳ್ಳು ವರದಿಗಳನ್ನು ಮಾಡುವ ಮೂಲಕ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಪಾಲಿಕೆ ಸದಸ್ಯರಾದ ಟಿ.ಶ್ರೀನಿವಾಸ್ ಮೋತ್ಕರ್, ಹನುಮಂತಪ್ಪ ಕೆ., ಹನುಮಂತ ಜಿ., ಮುಖಂಡರಾದ ರಾಮಲಿಂಗಪ್ಪ, ಸುಗುಣ, ಐನಾಥ್ ರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net