ಬಳ್ಳಾರಿ: ತಾಲೂಕಿನ ಕೊಳಗಲ್ ಬಳಿ ಜಿಲ್ಲಾ ಕಾರಾಗೃಹ ಇಲಾಖೆಗೆ ಸೇರಿದ 3.41 ಎಕರೆ ಪ್ರದೇಶವನ್ನು ವ್ಯಕ್ತಿಯೊಬ್ಬರು ಅತಿಕ್ರಮಿಸಿರುವುದಾಗಿ ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕಿ ಲತಾ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೊಳಗಲ್‌ನ ಸರ್ವೆ ನಂ 867/ಬಿರಲ್ಲಿ ಕಾರಾಗೃಹ ಇಲಾಖೆಗೆ ಸೇರಿದ 3.41 ಎಕರೆ ಜಮೀನು ಇದ್ದು, ಇದರಲ್ಲಿ ರಾಮು ಇತ್ತೀಚಿಗೆ ಭತ್ತದ ಬೆಳೆ ನಾಟಿ ಮಾಡಿದ್ದ ಎಂಬುದಾಗಿ ತಿಳಿದಿದೆ. ಎಚ್ಚರಿಕೆ ಹೊರತಾಗಿಯೂ ಆತ ವ್ಯವಸಾಯ ಮುಂದುವರೆಸಿದ್ದ ಎನ್ನಲಾಗಿದೆ. ಜತೆಗೆ, ಜಮೀನು ಕಾರಾಗೃಹ ಇಲಾಖೆ ಸೇರಿದ್ದ ಎಂದು ಹಾಕಲಾಗಿದ್ದ ನಾಮಫಲಕವನ್ನೂ ರಾಮು ತೆರವುಗೊಳಿಸಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
====