ಸಶಕ್ತ ಭಾರತ ನಿರ್ಮಾಣಕ್ಕೆ ಆದರ್ಶಪ್ರಾಯ

Published on

ಬಳ್ಳಾರಿ ; ಆಧುನಿಕ ಮತ್ತು ಸಶಕ್ತ ಭಾರತ ನಿರ್ಮಾಣ ಮಾಡುವಲ್ಲಿ ಸ್ವಾಮಿ ವಿವೇಕಾನಂದರ ಜ್ಞಾನ ತಿಳುವಳಿಕೆ ಮತ್ತು ಪರಿಹಾರೋಪಾಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಚಿಂತಕ ಎಚ್.ಕೆ. ವಿವೇಕಾನಂದ ಹೇಳಿದರು.

ಇಲ್ಲಿನ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಸಮಗ್ರ ಚಿಂತನೆಗಳು ಮತ್ತು ಯುವ ಭಾರತ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಭವಿಷ್ಯದ ಭಾರತ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಅಪಾರವಾಗಿದೆ. ಹೆಚ್ಚು ಯುವ ಸಮುದಾಯ ಹೊಂದಿರುವ ಭಾರತ ಇಂದು ಅಪಾಯದಲ್ಲಿದೆ. ಮಾನವಿಯ ಮೌಲ್ಯಗಳು, ವೈಚಾರಿಕ ಚಿಂತನೆಗಳು ಹಾಗೂ ಸಂಬಂಣಧಗಳು ಇದು ವ್ಯವಹಾರಿಕವಾಗಿವೆ. ಮಾನವಿಯ ವಿರುದ್ದದ ಮೌಲ್ಯಗಳು ಸಮಾಜದಲ್ಲಿ ಸ್ಥಾನ ಪಡೆಯುತ್ತಿವೆ. ನಿಮ್ಮನ್ನು ನೀವು ಅನುಕರಿಸಿ, ತಂದೆ, ತಾಯಿ ಮತ್ತು ಗುರುಗಳನ್ನು ಆದರ್ಶಪ್ರಾಯವಾಗಿ ಆಗಿ ಸ್ವೀಕರಿಸಿ ಪ್ರಬುದ್ದರಾಗಬೇಕು ಎಂದು ಕರೆ ನೀಡಿದರು.

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರೊ. ಅನುರಾಧಾ ಮಾತನಾಡಿ, ಭಾರತದ ಚಿಂತನೆಗಳನ್ನು, ವೈಚಾರಿಕತೆಯನ್ನು ಸೂಕ್ಷ್ಮ ಉದಾಹರಣೆಗಳನ್ನು ನೀಡುತ್ತ ಜಗತ್ತಿಗೆ ಪರಿಚಯಿಸಿದರು. ಭಾರತೀಯ ಸಂಸ್ಕೃತಿ, ವೈಚಾರಿಕತೆ, ಆವಿಷ್ಕಾರ, ವೈದಿಕ ಕೊಡುಗೆಗಳನ್ನು ವಿಶ್ವವೇ ಮೆಚ್ಚಿಕೊಂಡಿದೆ. ಪ್ರಪಂಚದ ಹಲವು ಮುಂದುವರೆದ ರಾಷ್ಟಗಳ ಉನ್ನತ ಸ್ಥಾನಗಳ ಚುಕ್ಕಾಣಿ ಹಿಡಿದಿರುವುದು ಭಾರತೀಯರೆ ಎಂದರು. ಸ್ವಯಂ ವಿಶ್ವಾಸದ ಬಲದಿಂದ ವಿಶ್ವವನ್ನೆ ಬದಲಾಯಿಸಬಹುದು ಎನ್ನುವ ಸಂದೇಶವನ್ನು ವಿವೇಕಾನಂದರು ಜಗತ್ತಿಗೆ ಸಾರಿದರು ಎಂದು ತಿಳಿಸಿದರು.

ವಿವಿ ಕುಲಪತಿ ಎಂ. ಮುನಿರಾಜು ಮಾತನಾಡಿ, ಭಾರತವು 2047ರ ಹೊತ್ತಿಗೆ ಯುವಭಾರತವಾಗಿ ಪರಿವರ್ತನೆಯಾಗಲಿದೆ. ಭಾರತದಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗುತ್ತಿಲ್ಲ. ಯುವ ಸಮುದಾಯ ಉದ್ಯೋಗಕ್ಕೆ ಸೀಮಿತವಾಗದೆ ಉದ್ಯೋಗ ಸೃಷ್ಟಿಸುವಂತಾಗಲಿ. ದ್ವೇಷ ಮನೋಭಾವನೆ ಬಿಟ್ಟು ತಂದೆ ತಾಯಿ, ಗುರುವನ್ನು ಗೌರವಯುತವಾಗಿ ಕಾಣಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net