ಶಾಸಕರಿಂದ ಕಾಮಗಾರಿಗಳ ಪರಿಶೀಲನೆ

Published on

ಬಳ್ಳಾರಿ : ಇಲ್ಲಿನ ಕನಕದುರ್ಗಮ್ಮ ದೇವಸ್ಥಾನ ಬಳಿಯ ರೈಲ್ವೆ ಕೆಳ ಸೇತುವೆ ಸೇರಿದಂತೆ ನಗರದ ವಿವಿಧ ಕಾಮಗಾರಿಗಳನ್ನು ಶಾಸಕ ನಾರಾ ಭರತರೆಡ್ಡಿ ಸೋಮವಾರ ಪರಿಶೀಲಿಸಿದರು.

ಕೆಕೆಆರ್‌ಡಿಬಿಯ ಸಿಎಂ ವಿವೇಚನಾ ನಿಧಿಯಿಂದ ಆರಂಭಗೊಂಡಿರುವ ರೈಲ್ವೆ ಕೆಳ ಸೇತುವೆ ಹಾಗೂ ಬಸ್ ತಂಗುದಾನದ ಪಕ್ಕದ ಪಾದಚಾರಿ ರಸ್ತೆ, ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಬಳಿ ಅಕ್ರಮವಾಗಿರುವ ಅಳವಡಿಸಿರುವ ಹೋರ್ಡಿಂಗ್ಸ್, ಬ್ಯಾರಿಕೇಡ್‌ಗಳು ತೆರವುಗೊಳಿಸಲು ಆದೇಶಿಸಿದರು. ಬಳಿಕ ಮೋತಿ ವೃತ್ತದ ರಸ್ತೆಯ ಮಧ್ಯೆದಲ್ಲಿರುವ ಕೋನ ಕಾರ್ಪಸ್ ಗಿಡಗಳನ್ನು ಕಟಾವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತದನಂತರ ಎಪಿಎಂಸಿ ವೃತ್ತದ ಜೋಡೋ ಭಾರತ್ ನಿರ್ಮಾಣ, ವಾಲ್ಮೀಕಿ ವೃತ್ತದ ನವೀಕರಣ ಹಾಗೂ ಅಗಲೀಕರಣ, ಕೆಇಬಿ ವೃತ್ತದ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪರಿಶೀಲಿಸಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಎಂದು ಶಾಸಕ ನಾರಾ ಭರತರೆಡ್ಡಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net