4.22 ಲಕ್ಷ ರೂ. ಮೌಲ್ಯದ ಅಕ್ರಮ ಪಡಿತರ ವಶ

Published on

ಬಳ್ಳಾರಿ ; ತಾಲೂಕಿನ ಸಂಗನಕಲ್ಲು ಗ್ರಾಮದ ಹೊರವಲಯದ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಹಾಗೂ ಜೋಳವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ಗ್ರಾಮದ ನಿವಾಸಿ ವಿಶ್ವನಾಥಗೌಡ ಎಂಬವನನ್ನು ಬಂಧಿಸಲಾಗಿದೆ. 2.59 ಲಕ್ಷ ರೂ. ಮೌಲ್ಯದ 112 ಕ್ವಿಂಟಾಲ್ ಅಕ್ಕಿ ಹಾಗೂ 1.63 ಮೌಲ್ಯದ 49 ಕ್ವಿಂಟಾಲ್ ಜೋಳ ಸೇರಿದಂತೆ ಒಟ್ಟಾರೆ 4.22 ಲಕ್ಷ ರೂ. ಮೌಲ್ಯದ 161 ಅಕ್ರಮ ಪಡಿತರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net