

ಬಳ್ಳಾರಿ: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಆಯ್ಕೆಯಲ್ಲಿ ಬಳ್ಳಾರಿ ಜಿಲ್ಲೆಯನ್ನು ಕಡೆಗಣಿಸಲಾಗಿದೆ ಎಂದು ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಆರೋಪಿಸಿದರು.
ಇದನ್ನೂ ಓದಿ:ರಂಗಭೂಮಿ ಸಂಸ್ಕೃತಿ ಸಂಭ್ರಮದ ಸಡಗರ
ನಗರದ ಕನ್ನಡ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಅನೇಕ ಕಲಾವಿದರು ರಂಗಭೂಮಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಒಬ್ಬರನ್ನೂ ಆಯ್ಕೆ ಮಾಡಿಲ್ಲ. ಬೆಂಗಳೂರಿಗೆ 10 ಪ್ರಶಸ್ತಿ ನೀಡಿದರೆ ಉಳಿದ ಜಿಲ್ಲೆಗಳು ಪ್ರಶಸ್ತಿಯಿಂದ ವಂಚಿತವಾಗುತ್ತವೆ. ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಅಕಾಡೆಮಿ ನಿರ್ಲಕ್ಷೃ ವಹಿಸಿದೆ ಎಂದು ದೂರಿದರು.
ಕಳೆದ ವರ್ಷ ಕರ್ನಾಟಕ ನಾಟಕ ಅಕಾಡೆಮಿಯಿಂದ ಮೂರು ವರ್ಷಗಳ ಪ್ರಶಸ್ತಿ ನೀಡಲಾಗಿತ್ತು. ಒಟ್ಟು 90 ಪ್ರಶಸ್ತಿಗಳಲ್ಲಿ ಬಳ್ಳಾರಿಗೆ 1 ದೊರೆತಿತ್ತು. ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆಯನ್ನು ಹೊಗಳುವ ಅಕಾಡೆಮಿ ಅಧ್ಯಕ್ಷ, ಪ್ರಶಸ್ತಿ ವಿಚಾರ ಬಂದಾಗ ಕಡೆಗಣಿಸುತ್ತಿದ್ದಾರೆ. ಅಕಾಡೆಮಿ ಸದಸ್ಯ ಶಿವನಾಯಕ ದೊರೆ ಜಿಲ್ಲಾ ಉಸ್ತುವಾರಿಯಾಗಿದ್ದು ಜಿಲ್ಲೆಯನ್ನು ನಿರ್ಲಕ್ಷಿೃಸಿದ್ದಾರೆ. ಮುಂದಿನ ದಿನಗಳಲ್ಲಿ ಕಲಾವಿದರ ಸಭೆ ಆಯೋಜಿಸಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಪ್ರಮುಖರಾದ ರಮಣಪ್ಪ ಭಜಂತ್ರಿ, ಜಯಶ್ರೀ ಪಾಟೀಲ್, ತಿಪ್ಪೇಸ್ವಾಮಿ, ಎರ‌್ರಿಸ್ವಾಮಿ, ಹುಲುಗಪ್ಪ ಇತರರಿದ್ದರು.