ಬಳ್ಳಾರಿ : ಸಾಮಾಜಿಕ ಮತ್ತು ಮಾನವೀಯತೆಯಿಂದ ಬದಲಾವಣೆಯ ಹೊಣೆ ಹೊತ್ತಿರುವ ಸಂಸ್ಥೆಯ ಏಳಿಗೆಗೆ ಶ್ರಮಿಸುವೆ ಎಂದು ಇನ್ನಾರ್ ವೀಲ್ ಸಂಸ್ಥೆಯ ನೂತನ ಅಧ್ಯಕ್ಷೆ ಅಲ್ಲಂ ರಚನಾ ವಿನಾಯಕ ಹೇಳಿದರು.
ನಗರದ ಗಡಗಿ ಪ್ಯಾಲೆಸ್‌ನಲ್ಲಿ ಆಯೋಜಿಸಿದ್ದ ಇನ್ನಾರ್ ವೀಲ್ ಸಂಸ್ಥೆಯ ನೂತನ ಅಧ್ಯಕ್ಷೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷೆಯಾಗಿ ಅಧಿಕಾರಿಯಾಗಿ ಸ್ವೀಕರಿಸಿ ಮಾತನಾಡಿದರು. ಪ್ರತಿಯೊಬ್ಬರೂ ಸಮಾಜದಲ್ಲಿ ಅವರ ಪಾತ್ರ ನಿಭಾಯಿಸಿದ ವೇಳೆ ಬದಲಾವಣೆ ಸಾಧ್ಯ. ಜಿಲ್ಲೆಯ ಹಾಗೂ ಸಂಸ್ಥೆಯ ಸದಸ್ಯರ ಸಹಕಾರದೊಂದಿಗೆ ಗುರಿ ಸಾಧಿಸಲು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಜವಾಬ್ದಾರಿ ನಿರ್ವಹಿಸುವೆ ಎಂದರು.
ಕಳೆದ ಹಲವು ವರ್ಷಗಳಿಂದ ಸಂಸ್ಥೆಯೂ ಪರಿಸರ ಸಂರಕ್ಷಣೆ, ಮಕ್ಕಳ ಹಾಗೂ ಮಹಿಳೆಯರ ಹಕ್ಕುಗಳು ಜಾಗೃತಿ ಮೂಡಿಸಲಾಗುತ್ತಿದೆ. ಆದರಂತೆ, ಆರೋಗ್ಯ ಹಾಗೂ ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಮೂಡಿಸುತ್ತ ನಾನಾ ರೀತಿಯ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಸ್ತಕ ಸಾಲಿನಲ್ಲಿಯೂ ಸಂಸ್ಥೆಯೂ ವಿವಿಧ ಸಾಮಾಜಿಕ ಕಾರ್ಯಕ್ರಮ ಆಯೋಜಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಪದಾಧಿಕಾರಿಗಳ ಆಯ್ಕೆ : ರೂಪಾ ನಾಗಳ್ಳಿ (ಕಾರ್ಯದರ್ಶಿ), ಹೇಮಾ ಎರ‌್ರಿಸ್ವಾಮಿ (ಖಜಾಂಚಿ), ಪ್ರಶಾಂತಿ(ಐಎಸ್‌ಒ), ಕೆ.ವೈಷ್ಣವಿ (ಸಂಪಾದಕಿ)ಯಾಗಿ ಅಧಿಕಾರ ಸ್ವೀಕರಿಸಿದರು.