ಪತ್ನಿ ಕೊಲೆಗೆ ಯತ್ನ, ಪತಿಗೆ ಹತ್ತು ವರ್ಷ ಕಠಿಣ ಶಿಕ್ಷೆ

Published on

ಬಳ್ಳಾರಿ : ಪತ್ನಿಗೆ ಕೊಡಲಿಯಿಂದ ತಲೆಗೆ ಹೊಡೆದು ಕೊಲೆ ಪ್ರಯತ್ನಕ್ಕೆ ಯತ್ನಿಸಿದ್ದ ಪತಿಗೆ ಹತ್ತು ವರ್ಷ ಕಠಿಣ ಶಿಕ್ಷೆ ಹಾಗೂ 1.25 ಲಕ್ಷ ರೂ. ದಂಡ ವಿಧಿಸಿ, ಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಲಯದ ನ್ಯಾಯಾಧಿಶೆ ಕೆ.ಜಿ.ಶಾಂತಿ ತೀರ್ಪು ನೀಡಿ ಶುಕ್ರವಾರ ಆದೇಶಿಸಿದ್ದಾರೆ.

ತಾಲೂಕಿನ ಜಾನೆಕುಂಟೆ ತಾಂಡಾದ ಲೋಕುನಾಯಕ್ ಎಂಬಾತನೊಂದಿಗೆ ಜ್ಯೋತಿ ಬಾಯಿ 2013ಮೇ.31 ರಂದು ವಿವಾಹವಾಗಿದ್ದು, ಕೆಲ ತಿಂಗಳ ಬಳಿಕ ದೈಹಿಕ ಹಾಗೂ ಮಾನಸಿಕವಾಗಿ ತೊಂದರೆ ನೀಡಿ, ವರದಕ್ಷಿಣೆ ತರುವಂತೆ ಪೀಡಿಸಿದ್ದಾನೆ. ವರದಕ್ಷಿಣೆ ತರದ ಹಿನ್ನೆಲೆಯಲ್ಲಿ ಕೊಡಲಿಯಿಂದ ತಲೆಗೆ ಹೊಡೆದು ಮೆದುಳಿಗೆ ಪೆಟ್ಟಾಗಿ ಸುಮಾರು 32 ದಿನ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದು, ತೀವ್ರ ಸ್ವರೂಪದ ಗಾಯಗೊಂಡಿದ್ದರಿಂದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ದೋಷರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದಾರೆ. ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧಿಶೆ ಕೆ.ಜಿ.ಶಾಂತಿ ಹತ್ತು ವರ್ಷ ಕಠಿಣ ಶಿಕ್ಷೆ ಪ್ರಕಟಿಸಿ, 1.40ಲಕ್ಷ ರೂ. ದಂಡ ವಿಧಿಸಿ, ಮೊತ್ತದಲ್ಲಿ 50 ಸಾವಿರ ರೂ. ಹಣವನ್ನು ಗಾಯಾಳು ಜ್ಯೋತಿ ಬಾಯಿ ಅವರಿಗೆ ನೀಡುವಂತೆ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಂ.ಬಿ.ಸುಂಕಣ್ಣ ವಾದ ಮಂಡಿಸಿದ್ದಾರೆ.

====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net