ಬಳ್ಳಾರಿ ; ಮನೆಗಳ್ಳತನದಲ್ಲಿ ಭಾಗಿಯಾಗಿದ್ದ ಇಬ್ಬರ ಆರೋಪಿಗಳನ್ನು ಬಂಧಿಸಿ 12.95 ಲಕ್ಷ ರೂ. ಮೌಲ್ಯದ 185 ಗ್ರಾಂ ಬಂಗಾರ ಶನಿವಾರ ವಶಪಡಿಸಿಕೊಳ್ಳಲಾಗಿದೆ.
ರಾಯಚೂರು ಜಿಲ್ಲೆಯ ಸಿಂಧನೂರಿನ ಮಹಮ್ಮದ್ ಗೌಸ್, ದೇವದುರ್ಗದ ಹನುಮಂತ ಬಂಧಿತರು. ಕೆಲ ದಿನಗಳ ಹಿಂದೆ ಪಟ್ಟಣದ ವಿವಿಧಡೆ ಕಳ್ಳತನ ಎಸಗಿದ್ದರು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸಿದ ವೇಳೆ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಿ 185 ಗ್ರಾಂ ಬಂಗಾರ ಹಾಗೂ ಬೈಕ್ ಜಪ್ತಿಪಡಿಸಿಕೊಳ್ಳಲಾಗಿದೆ. ಈ ಕುರಿತು ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಚಾರಣೆ ತಂಡಕ್ಕೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.