ಯೋಗ, ವ್ಯಾಯಾಮದಿಂದ ಆರೋಗ್ಯ: ಸಚಿವ ಆನಂದ ಸಿಂಗ್ ಅಭಿಮತ; ಹೊಸಪೇಟೆಯಲ್ಲಿ ಸೈಕ್ಲೋಥಾನ್-2021ಕ್ಕೆ ಚಾಲನೆ

10012021 Bellary Minister Anand Singh Cyclothon-2021
Published on

ಬಳ್ಳಾರಿ: ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡುವುದರಿಂದ ಆರೋಗ್ಯ ಸದೃಢವಾಗಿರುತ್ತದೆ ಎಂದು ಅರಣ್ಯ, ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.

ಹೊಸಪೇಟೆಯಲ್ಲಿ ಭಾನುವಾರ ಜೈನ್ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ ನ್ಯೂ ಲೈಫ್ ನ್ಯೂ ಡಿಸ್ಟ್ರಿಕ್ ಸೆಲೆಬ್ರೇಷನ್ ಹೆಸರಲ್ಲಿ ಹಮ್ಮಿಕೊಂಡಿದ್ದ ಸೈಕ್ಲೋಥಾನ್ 2021 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನವೋಲ್ಲಾಸದ ಜೀವನ ಎಲ್ಲರದ್ದಾಗಬೇಕು. ಹೀಗಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರದೊಂದಿಗೆ ಯೋಗ ಹಾಗೂ ವ್ಯಾಯಾಮ ಮುಖ್ಯವಾಗಿದೆ. ಅಲ್ಲದೆ ಸೈಕಲ್ ಓಡಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಇಂತಹ ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಸದೃಢ ಆರೋಗ್ಯ ನಮ್ಮದಾಗಿಸಿಕೊಳ್ಳೋಣ ಎಂದರು.

ಬಳಿಕ ಸಂಘಟನೆ ಮುಖಂಡರೊಂದಿಗೆ ಸಚಿವರು ಸ್ವಲ್ಪ ಹೊತ್ತು ಸೈಕಲ್‌ನಲ್ಲಿ ಸಂಚರಿಸಿದರು. ಜೈನ್ ಆರ್ಗನೈಸೇಷನ್‌ನ ಇಂದರ್ ಕುಮಾರ ಜೈನ್, ಹಿತೇಶ್ ಬಾಗರೇಚ್, ಮಹೇಂದ್ರ ಜೈನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net