ಗೃಹ ಇಲಾಖೆ ಸಮವಸ್ತ್ರಧಾರಿ ಸಂಸ್ಥೆಯಾಗಿದೆ

Published on

ಬಳ್ಳಾರಿ : ಗೃಹ ರಕ್ಷಕದಳ ಸಂಸ್ಥೆಯು ಪೊಲೀಸ್ ಇಲಾಖೆಯ ಜತೆಗೂಡಿ ಸರಿ ಸಮಾನ ಕೆಲಸ ಮಾಡುತ್ತಿರುವ ಸಮವಸ್ತ್ರಧಾರಿ ಸಂಸ್ಥೆಯಾಗಿದೆ ಎಂದು ಬಳ್ಳಾರಿ ವಲಯ ಐಜಿಪಿ ಬಿ.ಎಸ್.ಲೋಕೇಶ್ ಕುಮಾರ ಹೇಳಿದರು.

ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಗೃಹರಕ್ಷಕದಳ ವತಿಯಿಂದ ಹಮ್ಮಿಕೊಂಡಿದ್ದ ಗೃಹರಕ್ಷಕರ ಈಶಾನ್ಯ ವಲಯ ಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಗೃಹರಕ್ಷಕರು ತಮ್ಮ ಕೆಲಸದ ಒತ್ತಡದಿಂದ ಮುಂದೆ ಬಂದು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಈಶಾನ್ಯ ವಲಯದ ಏಳು ಜಿಲ್ಲೆಗಳಿಂದ ಗೃಹರಕ್ಷಕರು ಆಗಮಿಸಿ ಕ್ರೀಡೆಗಳಲ್ಲಿ ಭಾಗವಹಿಸಿದ್ದು ಸಂತೋಷದ ವಿಷಯವಾಗಿದೆ ಎಂದರು.

ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಮಾತನಾಡಿ, ಗೃಹರಕ್ಷಕರು ತಮ್ಮ ಕರ್ತವ್ಯ ನಿಷ್ಠೆ ಮತ್ತು ಸಮಯ ಪಾಲನೆಯಿಂದ ಪೋಲಿಸ್ ಇಲಾಖೆಯ ಸಿಬ್ಬಂದಿಯೊಂದಿಗೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗೃಹರಕ್ಷಕರು ತಮ್ಮ ಕರ್ತವ್ಯ ವೇಳೆಯಲ್ಲೂ ಸಹ ಭಾಗವಹಿಸಿರುವುದು ಹೆಮ್ಮೆಯಾಗಿದೆ ಎಂದು ಹೇಳಿದರು.

ಕ್ರೀಡಾಕೂಟದಲ್ಲಿ 350 ಪುರುಷ ಮತ್ತು ಮಹಿಳಾ ಗೃಹ ರಕ್ಷಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net