ಬಳ್ಳಾರಿ : ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಬಳಿಯ ಹಾಕಿ ಕ್ರೀಡಾಂಗಣದಲ್ಲಿ ಜಿಲ್ಲಾ ಹಾಕಿ ಅಸೋಸಿಯೇಷನ್‌ವತಿಯಿಂದ ಡಿ.12 ರಿಂದ 15ರವರೆಗೆ ಅಂತರ ಜಿಲ್ಲಾ ಸಬ್ ಜೂನಿಯರ್ ಹಾಕಿ ಟೂರ್ನ್‌ಮೆಂಟ್ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಆರ್.ವಿ.ನಾಗರ್ಜುನ ರೆಡ್ಡಿ ತಿಳಿಸಿದರು.
ನಗರದ ಹಾಕಿ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉತ್ತರ ಕರ್ನಾಟಕವನ್ನು ಬಳ್ಳಾರಿ ಜೋನ್ ಒನ್ ಎಂಬುದಾಗಿ ವಿಭಾಗಿಸಿದೆ. ಈ ಜೋನ್‌ನಿಂದ ಧಾರವಾಡ, ಬೆಳಗಾವಿ, ರಾಯಚೂರು, ಬಾಗಲಕೋಟೆ, ಕಲ್ಬುರ್ಗಿ, ಹಾವೇರಿ, ಗದಗ, ಬಳ್ಳಾರಿ ಸೇರಿದಂತೆ ಎಂಟು ತಂಡಗಳು ಈ ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳಲಿವೆ. ಲೀಗ್ ಹಾಗೂ ನಾಕೌಟ್ ಪದ್ಧತಿಯಲ್ಲಿ ಪಂದ್ಯಗಳು ನಡೆಯಲಿವೆ. ಡಿ.14 ಸೆಮಿ ಫೈನಲ್ ಹಾಗೂ ಡಿ.15 ರಂದು ಫೈನಲ್ ಪಂದ್ಯ ಜರುಗಲಿದೆ. ಈ ಪಂದ್ಯಾವಳಿಯಲ್ಲಿ ವಿಜೇತರಾದವರು ಬೆಂಗಳೂರು ವಲಯದಲ್ಲಿ ಗೆದ್ದವರ ವಿರುದ್ಧ ಸೆಣಸಲಿದ್ದಾರೆ. ಒಟ್ಟಾರೆ ಹೊನಲು ಬೆಳಕಿನ ಒಟ್ಟು 15 ಪಂದ್ಯಗಳು ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು. ಕ್ರೀಡಾ ಇಲಾಖೆ ಸಹಾಯಕಿ ನಿರ್ದೇಶಿಕಿ ಗ್ರೇಸಿ ಟೂರ್ನಮೆಂಟ್ ಉದ್ಘಾಟಿಸಲಿದ್ದಾರೆ. ಅರ್ಜುನ ಪ್ರಶಸ್ತಿ ಪುರಸ್ಕೃತ ವಿ.ಆರ್.ರಘುನಾಥ ಅತಿಥಿಗಳಾಗಿ ಫೈನಲ್ ಪಂದ್ಯದಲ್ಲಿ ಉಪಸ್ಥಿತರಲಿದ್ದಾರೆ ಎಂದರು.
ಪ್ರಮುಖರಾದ ಜಿಲ್ಲಾ ಹಾಕಿ ತಂಡದ ತರಬೇತುದಾರ ವೈ.ಎಂ.ಶ್ರೀಧರಬಾಬು, ವ್ಯವಸ್ಥಾಪಕ ಸಯ್ಯದ್ ಸೈಫುಲ್, ಕಾರ್ಯದರ್ಶಿ ಎಸ್.ಕೃಷ್ಣ ರೆಡ್ಡಿ, ಶಿವಾನಂದ, ಮಹೇಶ ಇದ್ದರು.
====