ಬಳ್ಳಾರಿ, ಹೈಟೆಕ್ ಜಿಮ್ ನಿರ್ಮಾಣದ ಕಾಮಗಾರಿ ಸ್ಥಗಿತ
* ತರಾತುರಿಯಲ್ಲಿ ಇಲಾಖೆ ಭೂಮಿಪೂಜೆ
* ಕಾಲೇಜು ಆಡಳಿತ ಮಂಡಳಿ ಸರ್ಕಾರಕ್ಕೆ ಪತ್ರ
ವಿಜಯವಾಣಿ ಸುದ್ದಿಜಾಲ ಬಳ್ಳಾರಿ
ಕೋಟ್.... ನಗರದಲ್ಲಿ ಹೊಸದಾಬಳ್ಳಾರಿ : ಕಳೆದ ಒಂದು ವರ್ಷದ ಹಿಂದಯೇ ನಗರದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿಲು ಉದ್ದೇಶಿಸಿದ್ದ ಸುಸ್ಸಜ್ಜಿತ ಹೈಟೆಕ್ ಜಿಮ್ ಇಲಾಖೆಯ ಎಡವಟ್ಟಿನಿಂದ ಕಾಮಗಾರಿ ಸ್ಥಗಿತಗೊಂಡಿದೆ.
ಜಿಲ್ಲೆಯಲ್ಲಿ ಲಕ್ಷಾಂತರ ಯುವಕ, ಯುವತಿಯರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಮೂರು ಮಹಡಿಯ ಜಿಮ್ ನಿರ್ಮಿಸಲು ಉದ್ದೇಶಿಸಲಾಗಿತ್ತು. ಅಲ್ಲದೆ, ಆ ಸಂದರ್ಭದಲ್ಲಿ ಸಚಿವರಾಗಿದ್ದ ಬಿ.ನಾಗೇಂದ್ರ ಭೂಮಿ ಪೂಜೆ ಕೂಡ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ಜಿಮ್ ನಿರ್ಮಿಸಲು ಉದ್ದೇಶಿಸಿದ್ದ ಸ್ಥಳವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಅನುಮತಿ ಪಡೆಯದೆ ಏಕಾಏಕಿ ಕಾಮಗಾರಿ ಆರಂಭಿಸಿದ್ದು ಈಗ ತಲೆನೋವು ತಂದಿದೆ.
ನಗರದ ಬಹುದೊಡ್ಡ ಏಕೈಕ ಮೈದಾನ : ಇಲ್ಲಿನ ಡಾ.ರಾಜಕುಮಾರ ರಸ್ತೆಯಲ್ಲಿನ ಪದವಿ ಪೂರ್ವ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಹೊಸ ಜಿಮ್ಸ್ ನಿರ್ಮಾಣಕ್ಕೆ ಇಲಾಖೆ ಮುಂದಾಗಿತ್ತು. ಮೈದಾನದ ಸಮೀಪದಲ್ಲಿಯೇ ಪದವಿ ಕಾಲೇಜು, ಮುನ್ಸಿಪಲ್ ಹೈಸ್ಕೂಲ್ ಹಾಗೂ ಪಿಯು ಕಾಲೇಜುಗಳಿವೆ. ಈ ಎಲ್ಲ ಶಾಲಾ ಕಾಲೇಜುಗಳಿಗೆ ಏಕೈಕ ದೊಡ್ಡ ಮೈದಾನ ಇದಾಗಿದೆ. ಹೃದಯಭಾಗದಲ್ಲಿ ಇರುವುದರಿಂದ ನೂರರು ಕ್ರೀಡಾ ಪ್ರೇಮಿಗಳಿಗೆ ನೆಚ್ಚಿನ ಮೈದಾನ ಕೂಡ ಆಗಿದೆ. ಅಲ್ಲದೆ, ವಿವಿಧ ಪಕ್ಷಗಳಿಗೆ ರಾಜಕೀಯ ಹಾಗೂ ಇತರೆ ಸಮಾವೇಶಗಳನ್ನು ಇಲ್ಲಿ ಆಯೋಜಿಸುವುದರಿಂದ ಸುತ್ತಲಿನ ಜನರಿಗೆ ಸೇರಲು ಅನುಕೂಲವಾಗಿದೆ. ಆದರೆ, ಈಗ ಹೊಸದಾಗಿ ಕಟ್ಟುತ್ತಿರುವ ಜಿಮ್ ಈ ಮೈದಾನದಲ್ಲಿ ನಿರ್ಮಾಣಗೊಂಡರೆ ಆಟದ ಸ್ಥಳವು ಕಡಿಮೆಯಾಗಲಿದೆ. ಅಲ್ಲದೆ, ಕಾಮಗಾರಿ ಪೂರ್ಣಗೊಳ್ಳುವ ಸಮಯಕ್ಕೆ ಬೃಹತ್ ವಾಹನಗಳ ಸಂಚಾರದಿಂದ ಮೈದಾನ ಹಾಳಾಗುತ್ತಿದೆ ಎಂಬ ಭೀತಿ ಕೂಡ ಇದೆ. ಆರಂಭದಲ್ಲಿಯೇ ಜಿಮ್ ನಿರ್ಮಾಣಕ್ಕೆ ಸ್ಥಳಿಯರು ವಿರೋಧ ನಡುವೆ ಪೂಜೆ ನೆರವೇರಿಸಲಾಯಿತು.
ಅನುಮತಿ ಪಡೆಯದೆ ಭೂಮಿ ಪೂಜೆ : ಹೊಸದಾಗಿ ನಿರ್ಮಿಸಲು ಉದ್ದೇಶಿಸಿದ್ದ ಸ್ಥಳ ಮುನ್ಸಿಪಲ್ ಕಾಲೇಜಿಗೆ ಸಂಬಂಧಿಸಿದೆ. ಆದ್ದರಿಂದ, ಈ ಸ್ಥಳದಲ್ಲಿಯೇ ಯಾವುದೇ ಕಾಮಗಾರಿ ಆರಂಭಿಸುವ ಮುನ್ನ ಕಾಲೇಜಿನ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು ಏಕಾಏಕಿ ಅನುಮತಿ ಪಡೆಯದೆ ಆ ಸ್ಥಳದಲ್ಲಿ ಸಚಿವರಿಂದ ಭೂಮಿ ಪೂಜೆ ನೆರವೇರಿಸಿ ನಿರ್ಮಾಣಕ್ಕೆ ಮುಂದಾಗಿದೆ. ಕಾಲೇಜು ಆಡಳಿತ ಮಂಡಳಿಯು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸ್ಥಳ ಅನುಮತಿ ಪಡೆಯದೆ ಜಿಮ್ ನಿರ್ಮಾಣಕ್ಕೆ ಮುಂದಾಗಿದೆ ಎಂಬುದಾಗಿ ಪತ್ರ ಬರೆದಿದೆ. ಉಪನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದಿರುವುದರಿಂದ ಸದ್ಯ ಕಾಮಗಾರಿ ಸ್ಥಗಿತಗೊಳಿಸಿದೆ. ಯಾವುದೇ ಒಂದು ಕಾಮಗಾರಿ ಆರಂಭದ ಮುನ್ನ ಸ್ಥಳದ ಅನುಮತಿ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸುವುದು ಆ ಇಲಾಖೆಯ ಜವಾಬ್ದಾರಿಯಾಗಿದೆ. ಆದರೆ, ಜಿಲ್ಲೆಯ ಬಹುಕೋಟಿ ರೂ. ವೆಚ್ಚದ ಜಿಮ್ ನಿರ್ಮಾಣ ಬಗ್ಗೆ ಅಧಿಕಾರಿಗಳು ಪ್ರಾಥಮಿಕವಾಗಿ ಸ್ಥಳದ ಅನುಮತಿ ಪಡೆಯದೆ ಭೂಮಿಪೂಜೆಗೆ ಮುಂದಾಗಿರುವುದು ಇಲಾಖೆಯ ಬಹುದೊಡ್ಡ ಬೇಜಬ್ದಾರಿಯೆಂದೆ ಪರಿಗಣಿಸಬಹುದು. ಒಂದು ವೇಳೆ ಜಿಮ್ ನಿರ್ಮಾಣ ಬಳಿಕ ಸ್ಥಳ ಅನುಮತಿ ಬಗ್ಗೆ ಕಾಲೇಜು ಕೋರ್ಟ್ ಮೊರೆ ಹೋಗಿದ್ದರೆ ಯಾರಿಗೆ ನಷ್ಟವಾಗುತ್ತಿತ್ತು ಎಂಬುದಾಗಿ ಕಾಲೇಜು ಉಪನ್ಯಾಸಕರೊಬ್ಬರು ಪ್ರಶ್ನಿಸಿದರು.
ಜಿಮ್ ನಿರ್ವಹಣೆ ಇಲ್ಲ : ಈಗಾಗಲೇ ಇಲ್ಲಿನ ಬಿಡಿಎಎ ಫುಟ್ಬಾಲ್ ಕ್ರೀಡಾಂಗಣದ ಕಚೇರಿಯಲ್ಲಿ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಜಿಮ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಈ ಜಿಮ್‌ನಲ್ಲಿರುವ ಸೌಲಭ್ಯ ಹಾಗೂ ಪರಿಕರಗಳ ಬಗ್ಗೆ ಹಲವರಿಗೆ ಮಾಹಿತಿಯಿಲ್ಲ. ಕೆಲವೊಂದು ಹಾಳಾಗಿದ್ದು ದುರಸ್ತಿಗೊಳಿಸದೆ ಹಲವು ವರ್ಷಗಳೆ ಕಳೆದಿವೆ. ಹಳೆಯ ಜಿಮ್ ಬಗ್ಗೆ ಅಧಿಕಾರಿಗಳ ಗಮನಕ್ಕೆ ಇಲ್ಲ ನಗರದ ಬಹುದೊಡ್ಡ ಮೈದಾನದಲ್ಲಿ ಜಿಮ್ ನಿರ್ಮಿಸಿ ಆಟದ ಮೈದಾನವನ್ನು ಹಾಳು ಮಾಡುತ್ತಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಗಿ ಜಿಮ್ ನಿರ್ಮಾಣದ ಸ್ಥಳದ ಬಗ್ಗೆ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆಯಲಾಗಿತ್ತು. ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದಿದ್ದು ಇನ್ನೂ ಪರಿಶೀಲನೆ ಹಂತದಲ್ಲಿದೆ.
- ಟಿ.ಪಾಲಾಕ್ಷಿ, ಡಿಡಿಪಿಯು, ಬಳ್ಳಾರಿ.