ಆರೋಗ್ಯ ತಪಾಸಣೆ ಶಿಬಿರ ಆಯೋಜನೆ

Published on

ಬಳ್ಳಾರಿ : ಅಲಿಮ್ಕೊ ಆಕ್ಸಿಲಿಯರಿ ಉತ್ಪಾದನಾ ಕೇಂದ್ರದಿಂದ ಎಡಿಐಪಿ ಹಾಗೂ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಮತ್ತು ವಿಕಲಚೇತನರಿಗೆ ಅವಶ್ಯವಿರುವ ಸಾಧನ ಸಲಕರಣೆ ವಿತರಿಸುವುದಕ್ಕೆ ತಾಲೂಕು ಮಟ್ಟದಲ್ಲಿ ವೈದ್ಯಕೀಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ತಪಾಸಣಾ ಶಿಬಿರದ ವಿವರ: ಡಿ.23 ರಂದು ನಗರದ ಜಿಲ್ಲಾಸ್ಪತ್ರೆ, ಡಿ.24 ರಂದು ಕುರುಗೋಡು, ಡಿ.26 ರಂದು ಸಿರುಗುಪ್ಪ , ಡಿ.27 ರಂದು ಸಂಡೂರು ತಾಲೂಕಿನ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬೆಳಗ್ಗೆ 10.30 ರಿಂದ ಸಂಜೆ 04 ರವರೆಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಮಾಹಿತಿಗೆ : ಬಳ್ಳಾರಿ-8880875620, ಸಿರುಗುಪ್ಪ-9743509698, ಸಂಡೂರು-9632052270, ಕುರುಗೋಡು-9538000887, ಮೊ:9731961326 ಹಾಗೂ ದೂ:08392-267886 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net