ಆರೋಗ್ಯಕ್ಕೆ ಸಾಂಪ್ರದಾಯಿಕ ಸೂತ್ರಗಳಿವೆ

Published on

ಬಳ್ಳಾರಿ : ಪ್ರತಿ ದೇಶಕ್ಕೂ ತಮ್ಮದೇ ಆದ ಸಾಂಪ್ರದಾಯಿಕ ಆರೋಗ್ಯದ ಸೂತ್ರಗಳಿವೆ. 95ಕ್ಕೂ ಹೆಚ್ಚು ಪಶ್ಚಿಮ ದೇಶಗಳಲ್ಲಿ ವಿವಿಧ ಔಷಧ ದ್ರವ್ಯಗಳ ವ್ಯಾಪಾರ ವಹಿವಾಟು ನಡೆಯುತ್ತಿವೆ ಎಂದು ಲಂಡನ್ ಆಯುರ್ವೇದ ಅಕಾಡೆಮಿಯ ನಿರ್ದೇಶಕ ಡಾ.ವೆಂಕಟ ನಾರಾಯಣ ಜೋಶಿ ಹೇಳಿದರು.

ಇಲ್ಲಿನ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ತಾರಾನಾಥ ಹಳೆಯ ವಿದ್ಯಾರ್ಥಿಗಳ ಸಂಘ, ನಿಮಾ ಬಳ್ಳಾರಿ ಮತ್ತು ನಿಮಾ ಮಹಿಳಾ ವೇದಿಕೆ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಯುರೋಪ್ ಮತ್ತು ಯುಕೆಯಲ್ಲಿ ಆಯುರ್ವೇದ ವಿಷಯದ ಮೇಲೆ ಒಂದು ದಿನದ ತಜ್ಞರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಶ್ಚಿಮ ದೇಶಗಳಲ್ಲಿ ಶಿವಲಿಂಗಿ ಮತ್ತು ಪುತ್ರಂಜೀವ ಬೀಜಗಳ ಸಂರಕ್ಷಣೆ ಮತ್ತು ಮಾರಾಟ ಮಾಡಲಾಗುತ್ತಿದೆ. ದೇವದಾರುವಿನ ಸುಗಂಧ ಸಾರವನ್ನು ಪುರುಷ ಬಂಜೆತನದಲ್ಲಿ ಉತ್ತರ ಬಸ್ತಿಯ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಅಮೃತ ಸತ್ವವು ಏಡ್ಸ್ ಚಿಕಿತ್ಸೆಯಲ್ಲಿ ಸಹಾಯಕವಾಗಿದೆ. ನಿರ್ಗುಂಡಿ, ಕಡಲ ಬೆಳ್ಳುಳ್ಳಿ ಮತ್ತು ಮರಿಚಾ ಇತ್ಯಾದಿ ಔಷಧೀಯ ಸಸ್ಯಗಳು ಯೂರೋಪ್‌ನಲ್ಲಿ ಲಭ್ಯವಿವೆ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ತಯಾರಿಸಲಾದ ಸ್ವಯಂ ಔಷಧಿಗಳು ಪರಿಣಾಮಕಾರಿಯಾಗಿವೆ ಎಂದರು.

ಕಾರ್ಯಕ್ರಮದಲ್ಲಿ ನೂತನವಾಗಿ ಅನುಸಂಧಾನ, ಹೊಸಪರಿಕಲ್ಪನೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net