ಗುಜರಾತ್‌ನಿಂದ ಮರಳಿದ ನಾಲ್ವರಲ್ಲಿ ಕರೊನಾ ಪಾಸಿಟಿವ್: ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್‌ಗೆ ರವಾನೆ

Corona Positive Case - Copy
Published on

ಬಳ್ಳಾರಿ: ಗುಜರಾಜ್‌ನಲ್ಲಿ ಮದುವೆ ಕಾರ್ಯ ಮುಗಿಸಿ ವಾಪಸಾದ ಜಿಲ್ಲೆಯ ನಾಲ್ವರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಮದುವೆ ಮುಗಿದ ಬಳಿಕ ಜಿಲ್ಲೆಯ ಸಿರಗುಪ್ಪ ನಗರಕ್ಕೆ ಮರಳುತ್ತಿದ್ದಂತೆ ನೆಗಡಿ, ಕೆಮ್ಮ ಜ್ವರ ಕಾಣಿಸಿದೆ. ನಂತರ ಸ್ವಾೃಬ್ ಟೆಸ್ಟ್ ಮಾಡಲಾಗಿದೆ.

ಈ ವೇಳೆ ನಾಲ್ವರಿಗೆ ಪಾಸಿಟಿವ್ ದೃಢಪಟ್ಟಿದ್ದು, ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್‌ಗೆ ರವಾನೆ ಮಾಡಲಾಗಿದೆ. ವರದಿ ಬಂದ ನಂತರವೇ ಇದು ರೂಪಾಂತರಿಯ ವೈರಸ್ಸಾ ಅಥವಾ ಸಾಮಾನ್ಯ ಕರೊನಾನಾ ಎಂಬುದು ತಿಳಿಯಲಿದೆ. ಸದ್ಯ ಸೋಂಕಿತರನ್ನು ಹೋಮ್ ಕ್ವಾರಂಟೈನ್‌ನಲ್ಲಿಡಲಾಗಿದೆ. ಬಳ್ಳಾರಿಯ ಖಾಸಗಿ ಶಾಲೆ ವಿದ್ಯಾರ್ಥಿಗೂ ಸೋಂಕು ತಗುಲಿದೆ. ಶಾಲೆಯನ್ನು ಸ್ಯಾನಿಟೈಸರ್ ಮಾಡಿ, ಸೀಲ್‌ಡೌನ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net