ಗೃಹಜ್ಯೋತಿ ಶೇ.100 ರಷ್ಟು ಪ್ರಗತಿ ಸಾಧಿಸಿ

Published on

ಬಳ್ಳಾರಿ : ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ ಅರ್ಹ ವಿದ್ಯುತ್ ಗ್ರಾಹಕರು ಶೇ.100 ರಷ್ಟು ಪ್ರಗತಿ ಸಾಧಿಸಲು ಕ್ರಮವಹಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಹೇಳಿದರು.

ನಗರದ ಜೆಸ್ಕಾಂ ವಲಯ ಕಚೇರಿಯ ಸಭಾಂಗಣದಲ್ಲಿ ಇಂಧನ ಇಲಾಖೆಯ ಗೃಹಜ್ಯೋತಿ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಕುರಿತು ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು ಅರ್ಹ 3,02,892 ಗ್ರಾಹಕರಲ್ಲಿ ಈವರೆಗೆ 2,80,282 ಗೃಹಜ್ಯೋತಿಗೆ ನೋಂದಣಿಯಾಗಿದ್ದಾರೆ. ಬಹುಸ್ಥಾವರಗಳು, ಖಾಲಿ ಮನೆಗಳು, ವಲಸೆ ಕಾರ್ಮಿಕರ ಸ್ಥಾವರಗಳು 12,410 ಗಳನ್ನು ಹೊರತುಪಡಿಸಿ ಶೇ. 96% ನೋಂದಣಿಯಾಗಿರುವುದು ತೃಪ್ತಿಕರ ವಿಷಯವಾಗಿದ್ದು, ಸಿಎಂ ಆಶಯದಂತೆ ಜಿಲ್ಲೆಯಲ್ಲಿ ಶೇ.100 ರಷ್ಟು ನೋಂದಣಿಗೆ ಎಲ್ಲ್ಲರೂ ಕೈಜೋಡಿಸಬೇಕು ಎಂದರು. ಜಿಲ್ಲೆಯಲ್ಲಿ ಅರ್ಹತೆಯಿದ್ದು ನೋಂದಣಿ ಮಾಡಿಕೊಳ್ಳದ 10,200 ಗ್ರಾಹಕರು ತಕ್ಷಣವೇ ತಮ್ಮ ಆಧಾರ್‌ಕಾರ್ಡ್ ಮತ್ತು ವಿದ್ಯುತ್ ಬಿಲ್‌ನೊಂದಿಗೆ ಹತ್ತಿರದ ಜೆಸ್ಕಾಂ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಬೇಕು. ಪರಿಸರ ಮಾಲಿನ್ಯ ರಹಿತ ವಿದ್ಯುತ್ ಉತ್ಪಾದನೆಗೆ ಸೋಲಾರ್ ಅಳವಡಿಸಿಕೊಳ್ಳುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net