ಗ್ರಾಮ ಪಂಚಾಯಿತಿ ಚುನಾವಣೆ: ಕಪ್ಪಗಲ್ಲು ಗ್ರಾಮದಲ್ಲಿ ಮಾಂಸ ವಿತರಣೆ, ವಿಡಿಯೋ ವೈರಲ್

21122020 Bellary GP Election Meat Distribution
Published on

ಬಳ್ಳಾರಿ: ಗ್ರಾಪಂ ಚುನಾವಣೆಯಲ್ಲಿ ಮತದಾರರಿಗೆ ತರಹೇವಾರಿ ಆಮಿಷಗಳನ್ನು ಒಡ್ಡಲಾಗುತ್ತಿದೆ. ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಆಟೋ ಮೂಲಕ ಮತದಾರರಿಗೆ ಮಾಂಸ ಹಂಚಲಾಗುತ್ತಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.

ಮತದಾರರ ಹೆಸರು ಹೇಳಿ ಅವರ ಮನೆಗೆ ನೀಡಬೇಕೆಂದು ಪ್ಲಾಸ್ಟಿಕ್ ಚೀಲ ವಿತರಿಸುವುದು ದೃಶ್ಯದಲ್ಲಿ ಸೆರೆಯಾಗಿದೆ. ಸಸ್ಯಹಾರಿಗಳಿಗೆ ವಗ್ಗರಣೆ ಹಾಕಿಕೊಳ್ಳಲು ಮಂಡಕ್ಕಿ, ಬದನೆಕಾಯಿ, ಟೊಮ್ಯಾಟೋ, ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ, ಅಡುಗೆ ಎಣ್ಣೆ ನೀಡಲಾಗಿದೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು. ಕಪ್ಪಗಲ್ಲು ಗ್ರಾಮದಲ್ಲಿ ಇದುವರೆಗೆ ಅವಿರೋಧ ಆಯ್ಕೆ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿರುವುದರಿಂದ ಅಭ್ಯರ್ಥಿಗಳು ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ.

ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಗ್ರಾಮಗಳಲ್ಲಿ ಅಭ್ಯರ್ಥಿಗಳು ಅವರ ಸಾಮರ್ಥ್ಯಕ್ಕೆ ಅನುಸಾರವಾಗಿ ವಾರ್ಡ್ ವ್ಯಾಪ್ತಿಯ ಮತದಾರರಿಗೆ ಕುಕ್ಕರ್, ಸೀರೆ, ಕುಪ್ಪಸವನ್ನೂ ವಿತರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net