ಬಳ್ಳಾರಿ ಜಿಲ್ಲೆಯ 232 ಗ್ರಾಪಂಗಳಲ್ಲಿ 13.61 ಲಕ್ಷ ಮತದಾರರು

09122020 Bellary Voters
Published on

ಬಳ್ಳಾರಿ: ಜಿಲ್ಲೆಯ 232 ಗ್ರಾಪಂಗಳಲ್ಲಿ 13.61 ಲಕ್ಷ ಮತದಾರರಿದ್ದಾರೆ. ಈ ಪೈಕಿ ಮೊದಲ ಹಂತದ ಚುನಾವಣೆ ನಡೆಯುವ ಬಳ್ಳಾರಿ, ಕುರುಗೋಡು, ಸಿರಗುಪ್ಪ, ಹೊಸಪೇಟೆ ಹಾಗೂ ಕಂಪ್ಲಿ ತಾಲೂಕಿನ 87 ಗ್ರಾಪಂಗಳಲ್ಲಿ 2.66 ಲಕ್ಷ ಪುರುಷ, 2.72 ಲಕ್ಷ ಮಹಿಳಾ ಹಾಗೂ 81 ಇತರ ಮತದಾರರಿದ್ದಾರೆ.

ಬಳ್ಳಾರಿ, ಕುರುಗೋಡು, ಸಿರಗುಪ್ಪ, ಹೊಸಪೇಟೆ, ಕಂಪ್ಲಿ ತಾಲೂಕಿನಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೊದಲ ಹಂತದ ಚುನಾವಣೆಗೆ 818 ಹಾಗೂ ಎರಡನೇ ಹಂತದ ಚುನಾವಣೆಗೆ 1255 ಮತಗಟ್ಟೆ ಸ್ಥಾಪಿಸಲಾಗಿದೆ. 539 ಚುನಾವಣಾ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಚುನಾವಣಾ ಕಾರ್ಯಗಳನ್ನು ನಿಗದಿತ ಅವಧಿಯಲ್ಲಿ ಮುಗಿಸಲು ಹಾಗೂ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಪ್ರತಿ ತಾಲೂಕಿಗೆ ಒಬ್ಬ ನೋಡಲ್ ಅಧಿಕಾರಿ ನೇಮಕ ವಾಡಲಾಗಿದೆ.

ಜಿಲ್ಲಾ ನಗರಾಭಿವೃದ್ಧಿ ಕೋಶದ ತಹಸೀಲ್ದಾರ್ ಕಾಳಪ್ಪ ಮತಗಟ್ಟೆಗಳ ಸಾಮಗ್ರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ದಾರ್ ಗುರುಪ್ರಸಾದ್ ಅವರನ್ನು ಮತಗಟ್ಟೆ ಮತ್ತು ಮತ ಎಣಿಕೆ ಸಿಬ್ಬಂದಿ ನೇಮಕ ಉಸ್ತುವಾರಿ ವಹಿಸಲಾಗಿದೆ. ಬಾಲಕಾರ್ಮಿಕ ಯೋಜನಾ ನಿರ್ದೇಶಕ ಮೌನೇಶಗೆ ಅಂಚೆ ಮತಗಳ ಮುದ್ರಣದ ಉಸ್ತುವಾರಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net