ಬಳ್ಳಾರಿ : ರಾಜ್ಯದ ರಾಜ್ಯಪಾಲರಾದ ಥಾವರ್‌ಚಂದ್ ಗೆಹೆಲೋತ್ ಅವರು ಜನವರಿ 17 ರಂದು ಜಿಲ್ಲೆಯಲ್ಲಿ ಒಂದು ದಿನದ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಜ.17 ರಂದು ಮಧ್ಯಾಹ್ನ 03.10 ಗಂಟೆಗೆ ಜಿಂದಾಲ್ನಿಂದ ಹೊರಟು ಸಂಜೆ 04 ಗಂಟೆಗೆ ಕುರುಗೋಡು ತಾಲೂಕಿನ ದಮ್ಮೂರು ಎಸ್‌ಬಿ ಸಂಸ್ಥೆಯ ಬೃಂದಾ ನ್ಯಾಷನಲ್ ಪಬ್ಲಿಕ್ ಶಾಲೆ, ಬೃಂದಾ ಪಿಯು ಕಾಲೇಜ್, ಬೃಂದಾ ಡಿಗ್ರಿ ಕಾಲೇಜ್ ಮತ್ತು ಸ್ಕಂದ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜ್‌ಗಳ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ ಸಂಜೆ 05 ಗಂಟೆಗೆ ವಿಶೇಷ ವಿಮಾನದ ಮೂಲಕ ಇಂದೋರ್‌ಗೆ ಪ್ರಯಾಣಿಸುವರು ಎಂದು ಪ್ರಕಟಣೆ ತಿಳಿಸಿದೆ.