ಸರ್ಕಾರದ ಪ್ರಾಯೋಜಿತ ಕೊಲೆ

Published on

ಬಳ್ಳಾರಿ : ಜಿಲ್ಲೆಯ ಐವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಇದೊಂದು ಸರ್ಕಾರದ ಪ್ರಾಯೋಜಿತ ಕೊಲೆ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಸಿ.ಮಂಜುಳಾ ಆರೋಪಿಸಿದರು.

ಇಲ್ಲಿನ ಜಿಲ್ಲಾಸ್ಪತ್ರೆಗೆ ರಾಜ್ಯ ಮಹಿಳಾ ಮೋರ್ಚಾ ಭೇಟಿ ನೀಡಿ ಹೆರಿಗೆ ವಾರ್ಡ್, ಐಸಿಯು, ಔಷಧಿ ಉಗ್ರಾಣ ಘಟಕ ಪರಿಶೀಲಿಸಿ ಮಾತನಾಡಿದರು. ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎನ್ನುವ ಪರಿಜ್ಞಾನವಿಲ್ಲ. ಜಿಲ್ಲಾ, ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವ ವ್ಯವದಾನವೂ ಸಹಯಿಲ್ಲ. ಮೃತ ಬಾಣಂತಿಯರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ತಬ್ಬಲಿಯಾದ ನವಜಾತ ಶಿಶುಗಳ ಪೋಷಣೆಗೆ ಸರ್ಕಾರವೇ ಸಹಾಯ ಮಾಡಬೇಕು. ಕಾಂಗ್ರೆಸ್ ಸರ್ಕಾರಕ್ಕೆ ಸ್ವಲ್ಪವೂ ಕಾಳಜಿಯಿಲ್ಲ ಕೇವಲ ಅಧಿಕಾರದ ಬಡಿದಾಟದಲ್ಲಿ ಮುಳುಗಿದೆ. ಆರೋಗ್ಯ ಸಚಿವ, ಜಿಲ್ಲಾ ಸಚಿವರು ಇದುವರೆಗೂ ಇಲ್ಲಿಗೆ ಭೇಟಿ ನೀಡುವ ಸೌಜನ್ಯ ಸಹ ತೋರಿಲ್ಲ. ಸಾವನ್ನಪ್ಪಿದವರ ಕುಟುಂಬಕ್ಕೆ ಸಾಂತ್ವನ ಹೇಳುವ ಪ್ರಯತ್ನವನ್ನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net