ಟಪಾಲ್ ಪತ್ರಕ್ಕೆ ಸರ್ಕಾರದಿಂದ ಪ್ರತಿಕ್ರಿಯೆ

Published on

ಬಳ್ಳಾರಿ : ರಾಜ್ಯದಿಂದ 884 ಕೋಟಿ ರೂ. ಮೌಲ್ಯದ 29 ಲಕ್ಷ ಟನ್ ಅದಿರುನ್ನು ಅಕ್ರಮವಾಗಿ ಹೊರತೆಗೆದು ಮಾರಾಟಗೊಳಿಸಿದ ಶಾಸಕ ಜಿ.ಜನಾರ್ದನರೆಡ್ಡಿ ನೇತೃತ್ವದ ಒಎಂಸಿ ಮತ್ತು ಅದರ ಸಹಚರ ಕಂಪನಿಗಳ ವಿರುದ್ದ ಪ್ರಕರಣ ಸಂಬಂಧಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದ ಗಣಿ ಉದ್ಯಮಿ ಟಪಾಲ್ ಗಣೇಶಗೆ ರಾಜ್ಯ ಸರ್ಕಾರ ಮೌಖಿಕವಾಗಿ ಉತ್ತರಿಸಿದೆ.

ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಗಣಿ ಉದ್ಯಮಿ ಟಪಾಲ್ ಗಣೇಶ ಕೇಂದ್ರದ ಉನ್ನತಾಧಿಕಾರಿ ಸಮಿತಿ (ಸಿಒಸಿ) 2011ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿ, ಲೋಕಾಯುಕ್ತ ವರದಿ, ಅಕ್ರಮ ಗಣಿಗಾರಿಕೆ ಕುರಿತು ಪ್ರಕರಣವೊಂದರಲ್ಲಿ ಹೈದರಾಬಾದ್‌ನ ಸಿಬಿಐ ನ್ಯಾಯಾಲಯ ನೀಡಿದ ತೀರ್ಪಿನ ಪ್ರತಿಯನ್ನು ಪೂರಕವಾಗಿ ಲಗತ್ತಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸದ್ಯ ಸರ್ಕಾರದಿಂದ ತೀರ್ಪಿನ ಪ್ರತಿಕ್ರಿಯೆಯಾಗಿ ಅರಣ್ಯ, ಕಂದಾಯ ಹಾಗೂ ಕಾನೂನು ಇಲಾಖೆ ಪತ್ರಗೆ ರವಾನಿಸಿದ್ದು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಮೌಖಿಕವಾಗಿ ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ.

====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net