ಬಳ್ಳಾರಿ : ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆಯಾಗಿದೆ ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಜೋಳದ ಬೆಳೆದಿರುವ ರೈತರ ಕಥೆ.
ಸಿರಗುಪ್ಪ, ಕುರುಗೋಡು ಹಾಗೂ ಸುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಪ್ರದೇಶದಲ್ಲಿ ಜೋಳ ಬೆಳೆಯಲಾಗಿದೆ. ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ 15 ಸಾವಿರ ಹೆಕ್ಟೇರ್ ಗುರಿ ಹೊಂದಿದ್ದು 21 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗಿದೆ. ಆರಂಭದಲ್ಲೇ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಎಕರೆಗೆ 10 ಕಿಂಟ್ವಾಲ್ ಜೋಳ ಖರೀದಿಸಲು ಆದೇಶಿಸಿತ್ತು. ಪ್ರಸ್ತುತ ಮುಂಗಾರು ಹಂಗಾಮಿನ ಜೋಳ ಖರೀದಿಸಲು ಸರ್ಕಾರ ಮುಂದಾಗಿದೆ. ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಆಧರಿಸಿ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ವ್ಯಾಪ್ತಿಯ ರೈತರು ಜೋಳ ಬಿತ್ತನೆ ಮಾಡುತ್ತಾರೆ. ಬಿಳಿ ಜೋಳ ಅಲ್ಪ ಅವಧಿಯ ಬೆಳೆಯಾಗಿರುವುದರಿಂದ ಚಳಿಗಾಲದಲ್ಲಿ ಕಟಾವು ಹಂತಕ್ಕೆ ಬಂದರೆ ಹೆಚ್ಚಿನ ಇಳುವರಿ ಬರಲಿದೆ. ಜಿಲ್ಲೆಯಲ್ಲಿ ರೈತರು ಹಿಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೋಳ ಬೆಳೆದಿದ್ದಾರೆ. ಕೇವಲ ಹತ್ತು ಕಿಂಟ್ವಾಲ್ ಖರೀದಿ ವಿರೋಧಿಸಿ ವಿವಿಧ ಸಂಘಟನೆಗಳು ಹಾಗೂ ರೈತರು ಎಕರೆಗೆ ಇಪ್ಪತ್ತು ಕಿಂಟ್ವಾಲ್ ಖರೀದಿಸುವಂತೆ ಒತ್ತಾಯಿಸಿ ಸರ್ಕಾರ ವಿರುದ್ಧ ಪ್ರತಿಭಟಿಸಿದ್ದರು. ರೈತರ ಹೋರಾಟಕ್ಕೆ ಮಣಿದ ಸರ್ಕಾರ ಎಕರೆ ಗೆ ಇಪ್ಪತ್ತು ಕಿಂಟ್ವಾಲ್ ಖರೀದಿಸುವುದಾಗಿ ಆದೇಶ ಪತ್ರ ಹೊರಡಿಸಿದೆ. ಆದರೆ, ಆಹಾರ ಇಲಾಖೆ ಇಲಾಖೆಯಲ್ಲಿ ಇನ್ನೂ ಆನ್ ಲೈನ್ ನಲ್ಲಿ ಆಪ್ ಡೇಟ್ ಆಗದೆ ಇರುವುದರಿಂದ ಸದ್ಯ ಹಿಂಗಾರು ಬೆಳೆಗೆ ಬೆಂಬಲ ಬೆಲೆಯಡಿ ಖರೀದಿಗೆ ಹತ್ತು ಕಿಂಟ್ವಾಲ್ ಮಾತ್ರ ಅಧಿಕಾರಿಗಳು ನೊಂದಣಿಸಿಕೊಳ್ಳಲಾಗುತ್ತಿದೆ. ಇದರಿಂದ ಹಲವು ರೈತರು ಇತ್ತ ಮಾರಾಟ ಮಾಡದೇ ಲಕ್ಷಾಂತರ ರೂ. ಹಣದಷ್ಟು ಜೋಳವನ್ನು ಗೋದಾಮು ಹಾಗೂ ಮನೆಗಳಲ್ಲಿ ಸಂಗ್ರಹಿಸಿಕೊಂಡಿದ್ದಾರೆ. ಇನ್ನೂ ಕೆಲ ರೈತರು ಇಪ್ಪತ್ತು ಕಿಂಟ್ವಾಲ್ ನೊಂದಣಿ ಆರಂಭವಾಗುವರೆಗೆ ಬಾಡಿಗೆಗೆ ಗೋದಾಮು ಪಡೆದು ಇಟ್ಟಿದ್ದಾರೆ.
ರೈತರ ಅಲೆದಾಟ : ಈಗಾಗಲೇ ಬೆಂಬಲ ಬೆಲೆಯಡಿ ಹಿಂಗಾರು ಬೆಳೆ ನೊಂದಣಿ ಆರಂಭವಾಗಿದೆ. ಸದ್ಯಕ್ಕೆ ನಿಗದಿತ ದಿನಾಂಕ ಪೂರ್ಣ ಗೊಳ್ಳುವ ಮುನ್ನವೇ ಹತ್ತು ಕಿಂಟ್ವಾಲ್ ಗೆ ಮಾತ್ರ ನೊಂದಯಿಸಿಕೊಳ್ಳಬೇಕು. ಇಲ್ಲದಿದ್ದರೆ ಗಡುವು ಮುಗಿದ ಬಳಿಕ ನೊಂದಣಿ ಪ್ರಕ್ರಿಯೆ ಕೂಡ ಇರುವುದಿಲ್ಲ. ಇನ್ನೂ ಇಲಾಖೆಯ ಆನ್ ಲೈನ್ ನಲ್ಲಿ ಇಪ್ಪತ್ತು ಕಿಂಟ್ವಾಲ್ ಗೆ ಆಪ್ ಡೇಟ್ ಯಾದ ಬಳಿಕ ಮತ್ತೋಮ್ಮೆ ಹತ್ತು ಕಿಂಟ್ವಾಲ್ ನೋಂದಯಿಸಿಕೊಳ್ಳಬೇಕು. ಇದರಿಂದ ರೈತರು ತಾಲೂಕು ಕೇಂದ್ರದ ನೊಂದಣಿ ಕೇಂದ್ರಗಳಿಗೆ ಎರಡ್ಮರೂ ಬಾರಿ ಅಲೆದಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೆ , ಅಧಿಕಾರಿಗಳಿಗೆ ಕೂಡ ಒಂದು ಕೆಲಸವನ್ನು ಎರಡೆರಡು ಬಾರಿ ಮಾಡಬೇಕಾದ ಪರಿಸ್ಥಿತಿಯಾಗಿದೆ. ಪ್ರತಿ ವರ್ಷ ಖರೀದಿ ಕೇಂದ್ರದಲ್ಲಿ ಸರ್ವರ್ ಸಮಸ್ಯೆಯಿಂದ ಹೆಸರು ನೋಂದಣಿಗೆ ರೈತರು ಅಲೆದಾಡುವಂತಾಗಿದೆ. ಹೆಸರು ನೋಂದಾಯಿಸಿದ ಬಳಿಕ ಖರೀದಿ ಕೇಂದ್ರಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಾರ್ಮಿಕರ ಕೊರತೆಯಿಂದ ರೈತರು ಫಸಲು ತಂದು ಕೇಂದ್ರಗಳ ಮುಂದೆ ಎರಡ್ಮೂರು ದಿನ ಕಾಯಬೇಕಾಗಿದೆ.
ಸರ್ಕಾರದ ದ್ವಂದ ನೀತಿಯಿಂದ ಕೆಲ ರೈತರು ದಲ್ಲಾಳಿಗಳ ಮೂಲಕ ಕಡಿಮೆ ಬೆಲೆ ಮಾರಾಟ ಮಾಡಲು ಮುಂದಾಗಿದ್ದಾರೆ.
ಕೋಟ್... ಈಗಾಗಲೇ ಜಿಲ್ಲೆಯಲ್ಲಿ ಬೆಂಬಲ ಬೆಲೆಯಡಿ ಹಿಂಗಾರು ಬೆಳೆಯ ನೊಂದಣಿ ಆರಂಭವಾಗಿದೆ. ರಾಜ್ಯ ಸರ್ಕಾರ ಇಪ್ಪತ್ತು ಕಿಂಟ್ವಾಲ್ ಖರೀದಿಸುವುದಾಗಿ ಕೇವಲ ಆದೇಶ ಮಾತ್ರ ಹೊರಡಿಸಿದೆ. ಇಲಾಖೆಯಲ್ಲಿ ಇನ್ನೂ ಆಪ್ ಡೇಟ್ ಯಾಗದೆ ಇರುವುದರಿಂದ ಕೇವಲ ಹತ್ತು ಕಿಂಟ್ವಾಲ್ ಗೆ ಮಾತ್ರ ನೋಂದಣಿಸಿಕೊಳ್ಳಲಾಗುವುದು. ಆನ್ ಲೈನ್ ನಲ್ಲಿ ಆಪ್ ಡೇಟ್ ಯಾದ ಬಳಿಕ ಮತ್ತೋಮ್ಮೆ ನೊಂದಣಿ ನಡೆಯಲಿದೆ.
_ ಸಕೀನಾ, ಆಹಾರ ಇಲಾಖೆ ಉಪ ನಿರ್ದೇಶಕಿ, ಬಳ್ಳಾರಿ.