ಬಳ್ಳಾರಿ : ಇಲ್ಲಿನ ಕೌಲಬಜಾರ್ ನಿವಾಸಿಯಾದ ಹುಲೆಗಮ್ಮ ಅವರಿಗೆ ಸಾಂಪಾದ್ರಯಿಕ ತೊಗಲುಗೊಂಬೆ ಪ್ರದರ್ಶನಕ್ಕೆ 2024ನೇ ಸಾಲಿನ ಸುವರ್ಣ ಮಹೋತ್ಸವ ಪ್ರಶಸ್ತಿ ದೊರೆತಿದೆ.
ದಿ. ಹುಲೆಪ್ಪ ಮತ್ತು ಪಾರ್ವತಮ್ಮ ದಂಪತಿಯ ಮೂರನೇ ಪುತ್ರಿಯಾಗಿ ಜನಿಸಿದ ಹುಲಿಗೆಮ್ಮ ಗಡಿಗ್ರಾಮದ ಲಕ್ಷ್ಮೀಪುರ ಗ್ರಾಮದಲ್ಲಿ 1962ರಲ್ಲಿ ಜನಿಸಿದರು. ಅನಕ್ಷರತೆಯಾಗಿದ್ದು ತೊಗಲು ಗೊಂಬೆಯಾಟದಲ್ಲಿ ಆಸಕ್ತಿ ಇದ್ದುದರಿಂದಲೇ ತೊಗಲು ಬೊಂಬೆ ಪ್ರದರ್ಶನವನ್ನು ಜೀವನ ಮಾಡಿಕೊಂಡರು. ಹಲವು ವರ್ಷಗಳಿಂದ ಜಿಲ್ಲೆ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ ತೊಗಲು ಗೊಂಬೆಯಾಟ ಪ್ರದರ್ಶನ ನೀಡಿದ್ದಾರೆ. ಸದ್ಯ ನಗರದಲ್ಲಿಯೇ ತಂಡ ಕಟ್ಟಿಕೊಂಡು ಗ್ರಾಮೀಣ ಭಾಗದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಜಂಟಿ ಕಾರ್ಯಕ್ರಮದಲ್ಲಿ ನಗರ ಪ್ರದೇಶಗಳಲ್ಲಿ ತೊಗಲು ಗೊಂಬೆ ಪ್ರದರ್ಶನ ನೀಡುತ್ತಿದ್ದಾರೆ.
ವಿವಿಧ ಉತ್ಸವಗಳಲ್ಲಿ ಭಾಗಿ : ಹಂಪಿ ಉತ್ಸವ, ಲಕ್ಕುಂಡಿ ಉತ್ಸವ, ಮಹಿಳಾ ಉತ್ಸವಗಳು ಸೇರಿದಂತೆ ವಿವಿಧ ಉತ್ಸವಗಳಲ್ಲಿ ತೊಗಲುಗೊಂಬೆಯಾಟ ಪ್ರದರ್ಶನ ನೀಡಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದ್ದಾರೆ. ಸಂಪೂರ್ಣ ರಾಮಾಯಣವನ್ನು ಮೂರು ರಾತ್ರಿಯ ಕಥಾಭಾಗವನ್ನು ದಕ್ಷಿಣಾದಿ ಮತ್ತು ಉತ್ತರಾದಿ ಹಾಡುಗಳನ್ನು ಹಾಡುವ ಕಲೆ ಹೊಂದಿದ್ದಾರೆ.ನಾಡೋಜ ಬೆಳಗಲ್ಲು ವೀರಣ್ಣ ಅವರ ಜತೆ ಸಹ ತೊಗಲುಗೊಂಬೆಯಾಟ ಪ್ರದರ್ಶನ ನೀಡಿದ್ದಾರೆ.
ಕೋಟ್..
ಕಾಲ ವೇಗದ ಬದಲಾವಣೆಗೆ ಸಿಲುಕಿ ಮರೆಯಾಗುತ್ತಿರುವ ತೊಗಲುಗೊಂಬೆಯಾಟ ಪ್ರದರ್ಶನಕ್ಕೆ ಮತ್ತೆ ಜೀವಂತಿಕೆಯನ್ನು ತುಂಬುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಇಂತಹ ವಿಶಿಷ್ಠ ಕಲೆಯನ್ನು ಪ್ರದರ್ಶಿಸುತ್ತಿರುವುದು ನನಗೂ ನನ್ನ ಕುಟುಂಬಕ್ಕೂ ತುಂಬಾ ಹೆಮ್ಮೆಯ ಹಾಗೂ ಅತ್ಯಂತ ಸಂತೋಷದ ವಿಷಯವಾಗಿದೆ.
- ಹುಲಿಗೆಮ್ಮ, ಸುವರ್ಣ ಮಹೋತ್ಸವ ಪ್ರಶಸ್ತಿ ವಿಜೇತ, ಬಳ್ಳಾರಿ.
====