ಚಿನ್ನಾಭರಣ, ನಗದು ಕಳವು

Published on

ಬಳ್ಳಾರಿ : ಇಲ್ಲಿನ ಬಸವೇಶ್ವರ ಕಾಲನಿಯ ಮನೆಯೊಂದರಲ್ಲಿ ಬೀಗ ಮುರಿದು 9.12 ಲಕ್ಷ ರೂ. ಮೌಲ್ಯದ ನಗದು, ಚಿನ್ನಾಭರಣ ಕಳವು ಮಾಡಲಾಗಿದೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲು ಬೀಗ ಮುರಿದು ಮನೆಯೊಳಗೆ ನುಗ್ಗಿ ಗ್ರಾಡೇಜ್‌ನಲ್ಲಿದ್ದ 950 ಗ್ರಾಂ ಬೆಳ್ಳಿ, 22 ಗ್ರಾಂ ಚಿನ್ನಾಭರಣ ಮತ್ತು 7.31 ಲಕ್ಷ ರೂ. ನಗದು ಸೇರಿ ಒಟ್ಟು 9.12 ಲಕ್ಷ ರೂ. ಕಳುವ ಆಗಿದೆ ಎಂದು ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಮನೆಯ ಮಾಲೀಕ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net