ದೇವಿಗೆ ಶ್ರೀವೆಂಕಟೇಶ್ವರ ಸ್ವಾಮಿ ಆಲಂಕಾರ

Published on

ಬಳ್ಳಾರಿ : ನಗರದ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಹಿನ್ನೆಲೆಯಲ್ಲಿ ದೇವಿಯ ಮೂರ್ತಿಗೆ ಶನಿವಾರ ಶ್ರೀವೆಂಕಟೇಶ್ವರ ಸ್ವಾಮಿ ಆಲಂಕಾರ ಮಾಡಲಾಗಿತ್ತು. ದೇವಿಗೆ ಅಭಿಷೇಕ, ಎಲೆಪೂಜೆ ಹಾಗೂ ಶ್ರೀಚಕ್ರ ಸಹಿತ ಕುಂಕುಮ ಆರ್ಚನೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಲಾಯಿತು. ಲಲಿತ ಸಹಸ್ರನಾಮ, ಹೋಮ ಹಾಗೂ ಮತ್ತೈದೆಯರಿಗೆ ಉಡಿ ತುಂಬಿ, ಪ್ರಸಾದ ವಿತರಿಸಲಾಯಿತು. ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ಕಲ್ಯಾಣೋತ್ಸವ ವಿಜೃಂಭಣೆಯಿಂದ ನಡೆಯಿತು. ನಂತರ ಸೂರ್ಯ ಕಲಾ ಟ್ರಸ್ಟ್ ಕೆ.ಸಿ.ಅಭಿಷೇಕ್ ತಂಡದಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net