ಗೋವು ರಕ್ಷಣೆಗೆ ಆದ್ಯತೆ - ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿಕೆ

040222 Polyclinic Building inaugurated by Minister B. Sriramulu at Bellary
ಬಳ್ಳಾರಿಯಲ್ಲಿ ಪಾಲಿಕ್ಲಿನಿಕ್ ಕಟ್ಟಡವನ್ನು ಶುಕ್ರವಾರ ಸಚಿವ ಬಿ.ಶ್ರೀರಾಮುಲು ಉದ್ಘಾಟಿಸಿದರು.
Published on

ಬಳ್ಳಾರಿ: ಪಶುಪಾಲನೆ ಮತ್ತು ಗೋವು ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ನಗರದ ಪಶುವೈದ್ಯಕೀಯ ಸೇವಾ ಇಲಾಖೆ ಕಚೇರಿ ಆವರಣದಲ್ಲಿ 4.05 ಕೋಟಿ ರೂ.ವೆಚ್ಚದ ಪಾಲಿಕ್ಲಿನಿಕ್ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಈಚೆಗೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣರು 21 ಗೋವು ದತ್ತು ಪಡೆದಿದ್ದಾರೆ. ಜನ್ಮದಿನದ ನಿಮಿತ್ತ ಸಿಎಂ ಬಸವರಾಜ ಬೊಮ್ಮಾಯಿ 11 ಗೋಶಾಲೆಗಳನ್ನು ದತ್ತು ಪಡೆದಿದ್ದಾರೆ. ಇದರಂತೆ ಎಲ್ಲ ಶಾಸಕರು, ಸಚಿವರು ಗೋವುಗಳನ್ನು ದತ್ತು ಪಡೆಯಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಮತ್ತು ನಾನು ರಾಜಕೀಯ ಹೊರತುಪಡಿಸಿದ ಆತ್ಮೀಯ ಸ್ನೇಹಿತರು. ಅವರ ಮರು ರಾಜಕೀಯ ಪ್ರವೇಶ ಕುರಿತು ನಾನೇನೂ ಮಾತನಾಡಲಾರೆ ಎನ್ನುವ ಮೂಲಕ ಬಿ.ಶ್ರೀರಾಮುಲು ಅಚ್ಚರಿ ಮೂಡಿಸಿದ್ದಾರೆ.

ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಬುಡಾ ಅಧ್ಯಕ್ಷ ಪಾಲನ್ನ, ಎಪಿಎಂಸಿ ಅಧ್ಯಕ್ಷ ಉಮೇಶ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಪರಮೇಶ್ವರನಾಯಕ್, ಪಾಲಿಕ್ಲಿನಿಕ್ ಉಪನಿರ್ದೇಶಕ ದತ್ತಾತ್ರೇಯ, ಪಶುತಜ್ಞ ವೈದ್ಯ ಡಾ.ಶಶಿಧರ್ ಸೇರಿದಂತೆ ಅನೇಕರು ಇದ್ದರು.

ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಮತ್ತು ನಾನು ರಾಜಕೀಯ ಹೊರತುಪಡಿಸಿದ ಆತ್ಮೀಯ ಸ್ನೇಹಿತರು. ಅವರ ಮರು ರಾಜಕೀಯ ಪ್ರವೇಶ ಕುರಿತು ನಾನೇನೂ ಮಾತನಾಡಲಾರೆ ಎನ್ನುವ ಮೂಲಕ ಬಿ.ಶ್ರೀರಾಮುಲು ಅಚ್ಚರಿ ಮೂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net