ಜೂಜೂಟ ಅಡ್ಡೆ ಮೇಲೆ ದಾಳಿ, 50 ಜನ ಬಂಧನ

Published on

ಬಳ್ಳಾರಿ : ನಗರದ ರಿಕ್ರಿಯೇಷನ್ ಹಾಗೂ ಮನಪ್ರಭ ಬಿಲ್ಡಿಂಗ್‌ನಲ್ಲಿ ಜೂಜೂಟದಲ್ಲಿ ತೊಡಗಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 3.58 ಲಕ್ಷ ರೂ. ವಶಪಡಿಸಿಕೊಂಡು ಐವತ್ತು ಜನರ ಮೇಲೆ ಎರಡು ಪತ್ಯೇಕ ಪ್ರಕರಣ ಬುಧವಾರ ದಾಖಲಿಸಲಾಗಿದೆ.

ನಗರದಲ್ಲಿ ಗೌರಿ ಗಣೇಶ ಹಬ್ಬದ ಮೊದಲ ದಿನದ ವಿಸರ್ಜನೆ ಅಂಗವಾಗಿ ಪೊಲೀಸ್ ಬಂದೋಬಸ್ತ್ ಹಿನ್ನೆಲೆ ಡಿಸಿ ಹಾಗೂ ಎಸ್ಪಿ ಜಂಟಿಯಾಗಿ ಕಾರ್ಯಾಚಾರಣೆ ನಡೆಸಲಾಗಿದೆ. ಕೌಲಬಜಾರ್ ಠಾಣೆ ವ್ಯಾಪ್ತಿಯ ಮನಪ್ರಭ ಕಟ್ಟಡದಲ್ಲಿ 47 ಹಾಗೂ ಬ್ರೂಸ್ ಪೇಟೆ ಠಾಣೆಯ ವ್ಯಾಪ್ತಿಯ ರಿಕ್ರಿಯೇಷನ್ ಕಟ್ಟಡದಲ್ಲಿ ಮೂವರನ್ನು ಸೇರಿ ಒಟ್ಟು 50 ಜನರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಮಾಹಿತಿ ನೀಡಿದರು.

==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net